ಲೋಕಸಭಾ ಎಲೆಕ್ಷನ್ ಮುಗಿದ ಮೇಲೆ ಸುಮಲತಾ ಅಂಬರೀಷ್ ಮನೆ ಖಾಲಿ ಮಾಡ್ತಾರೆ ಆಮೇಲೆ ಮಂಡ್ಯ ಕಡೆ ತಿರುಗಿಯೂ ನೋಡಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಸುಮಲತಾ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.
ಮಂಡ್ಯಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮುಗಿದ ಬಳಿಕ ಸುಮಲತಾ ಮಂಡ್ಯ ಕಡೆ ತಿರುಗಿಯೂ ನೋಡಲ್ಲ. ನಿಮ್ಮ ಕಷ್ಟ-ಸುಖ ವಿಚಾರಿಸಲು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಬೇಕು ಎಂದು ಹೇಳುವ ಮೂಲಕ ವಾಗ್ದಾಳಿಯನ್ನು ನಡೆಸಿದ್ದಾರೆ.
ಸುಮಲತಾ ಅವರ ಜೊತೆಗೆ ಮೋದಿಯನ್ನು ಸಹ ಟೀಕಿಸಿದ ರೇವಣ್ಣ, ಮೋದಿ ಅಧಿಕಾರಕ್ಕೆ ಬಂದ್ರೆ ಹಿಂದೂ-ಮುಸ್ಲಿಂ ಗಲಾಟೆ ಆಗುತ್ತೆ. ಬೆಕಂತಲೇ ಹೊಡೆದಾಟವನ್ನು ಮಾಡಿಸುವುದರ ಮೂಲಕ ದೇಶಕ್ಕೆ ಕಂಟಕ ತರುವ ಕೆಲಸವನ್ನು ಮೋದಿ ಮಾಡ್ತಿದ್ದಾರೆ ಜೊತೆಗೆ ಮೊನ್ನೆ ನಡೆದ ಸರ್ಜಿಕಲ್ ಸ್ಟ್ರೈಕ್ ರಾಜಕೀಯ ಪ್ರೇರಿತ ಎಂದು ರೇವಣ್ಣ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.