ಸುಮ್ನೆ ಮರ್ಯಾದೆಯಾಗಿದ್ದರೆ ಅವರಿಗೂ ಕ್ಷೇಮ: HDKಗೆ ಡಿಕೆಶಿ ವಾರ್ನಿಂಗ್!

Date:

ಸುಮ್ನೆ ಮರ್ಯಾದೆಯಾಗಿದ್ದರೆ ಅವರಿಗೂ ಕ್ಷೇಮ: HDKಗೆ ಡಿಕೆಶಿ ವಾರ್ನಿಂಗ್!

ಬೆಂಗಳೂರು:- ಕುಮಾರಸ್ವಾಮಿ ಮರ್ಯಾದೆಯಿಂದ ಇದ್ರೆ ಕ್ಷೇಮ ಎಂದು ಹೇಳುವ ಮೂಲಕ ಡಿಕೆಶಿ ವಾರ್ನಿಂಗ್ ಕೊಟ್ಟಿದ್ದಾರೆ.

ಇಷ್ಟು ದಿನ ಕದನವಿರಾಮ ಘೋಷಣೆ ಮಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಮತ್ತೆ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ರಣರಣ ಅಂದಿದ್ದಾರೆ.

ಹೆಚ್‌‌ಡಿಕೆ ಭೂಮಿ ಒತ್ತುವರಿ ತೆರವು ದ್ವೇಷದ ರಾಜಕಾರಣ ಎಂಬ ಹೇಳಿಕೆ ಡಿಕೆಶಿ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನೋಡ್ರಿ ಇಡಿ ದೇಶಕ್ಕೆ ಗೊತ್ತು, ನಾವ್ಯಾರಾದರೂ ಕೇಸ್ ಹಾಕಿದ್ದೇವಾ? ಹದಿನೈದು- ಇಪತ್ತು ವರ್ಷದಿಂದ ಆ ಹಿರೇಮಠ ನನ್ಮೇಲೂ ಕೇಸ್ ಹಾಕಿದ್ದಾರೆ. ಅವರ ಮೇಲೆಯೂ ಕೇಸ್ ಹಾಕಿದ್ದಾರೆ. ಕುಮಾರಸ್ವಾಮಿ ಯಾಕೆ ಗಾಬರಿ ಮಾಡ್ಕೋಬೇಕು ಅಂತಾ ತಿರುಗೇಟು ನೀಡಿದರು.

ಏನ್ ದ್ವೇಷದ ರಾಜಕಾರಣ ಮಾಡುತ್ತಾರೆ? ಕೋರ್ಟ್ ಆಫೀಸರ್‌ಗೆ ನಿರ್ದೇಶನ ನೀಡಿದೆ. ಈ ಹಿಂದೆಯೂ ಲೋಕಾಯುಕ್ತದಲ್ಲಿ ಎಲ್ಲಾ ಕೇಸ್ ನಡೆದಿರೋದು ನೆನಪಿದೆ. ಸಿದ್ದರಾಮಯ್ಯ ಏನ್ ದ್ವೇಷ ಮಾಡ್ತಾರೆ. ನಾವೇನ್ ಮಾಡ್ತೀವಿ ಅಂತಾ ಕಿಡಿಕಾರಿದ್ರು.

ಅವರ ಡಿಎನ್‌ಎನಲ್ಲಿ ದ್ವೇಷ ರಾಜಕಾರಣ ಇದೆ. ಮೈಸೂರಲ್ಲಿ ಏನ್ ಏನ್ ಮಾತಾಡಿದ್ರು. ಅವರ ತಂದೆ ಏನ್ ಏನ್ ಮಾತಾಡಿದ್ರು. ನನ್ಮೇಲೆ ಏನ್ ಏನ್ ಕೇಸ್ ಹಾಕಿಸಿದ್ರು ಗೊತ್ತಿದೆ. ನನ್ನ ತಂಗಿ, ನನ್ ಹೆಂಡ್ತಿ , ನನ್ನ ತಮ್ಮ ಮೇಲೆ ಅದಿರು ಕಳ್ಳತನ ಮಾಡಿದ್ದೇವೆ ಎಂದು ಕೇಸ್ ಹಾಕಿಸಿದ್ರು. ನಮಗೂ ಬಳ್ಳಾರಿಗೂ ಸಂಬಂಧವೇ ಇಲ್ಲ, ಆಗ ಹಾಕಿಸಿದ್ದು ದ್ವೇಷ ಅಲ್ವಾ? ಸುಮ್ಮನೆ ಆಯ್ತು ಎಂದು ಜೊತೆಗೆ ಸರ್ಕಾರ ಮಾಡಿದ್ದೆವು. ಕುಮಾರಸ್ವಾಮಿ ಮರ್ಯಾದೆಯಿಂದ ಇದ್ರೆ ಅವರಿಗೂ ಕ್ಷೇಮ ಎಂದು ಎಚ್ಚರಿಕೆ ನೀಡಿದರು.

Share post:

Subscribe

spot_imgspot_img

Popular

More like this
Related

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ...

ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಳಿ, ಕೆಂಪು, ಗುಳ್ಳೆಗಳು: ನಾಲಿಗೆಯ ಬದಲಾವಣೆಗಳ ಅರ್ಥ ಏನು?

ಬಿಳಿ, ಕೆಂಪು, ಗುಳ್ಳೆಗಳು: ನಾಲಿಗೆಯ ಬದಲಾವಣೆಗಳ ಅರ್ಥ ಏನು? ಆಹಾರ ಸರಿಯಾಗಿ ಜೀರ್ಣವಾದರೆ...