ಸುಶಾಂತ್ ಹೆಸರಲ್ಲಿ ರಾಷ್ಟ್ರ ಪ್ರಶಸ್ತಿ – ಇದೇನು ಥ್ರಿಲ್ಲಿಂಗ್ ನ್ಯೂಸ್

Date:

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಹೆಸರಲ್ಲಿ ರಾಷ್ಟ್ರ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ಪ್ಲ್ಯಾನ್‌ ಮಾಡುತ್ತಿದೆ ಎಂಬ ಮಾಹಿತಿಯೊಂದು ಈಗ ಬಿ-ಟೌನ್‌ನಲ್ಲಿ ಹರಿದಾಡುತ್ತಿದೆ. ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡ ಈ ಬಾಲಿವುಡ್‌ ನಟನ ಕುರಿತು ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರದಿಂದ ಹಲವು ವಿಭಾಗಗಳಲ್ಲಿ ಸಿನಿಮಾ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರತಿ ವರ್ಷ ಕೊಡಲಾಗುವ ಪ್ರಶಸ್ತಿಗಳ ಜೊತೆಗೆ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಹೆಸರಿನಲ್ಲಿಯೂ ಒಂದು ಪ್ರಶಸ್ತಿಯನ್ನು ಸೇರಿಸಬೇಕು ಎಂಬ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಕೆಲವು ಕಡೆ ವರದಿ ಆಗಿದೆ. ಆದರೆ ಈ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.

‘ಸುಶಾಂತ್‌ ಸಿಂಗ್‌ ರಜಪೂತ್‌ ಹೆಸರಿನಲ್ಲಿ ರಾಷ್ಟ್ರ ಪ್ರಶಸ್ತಿ ನೀಡುವ ಬಗ್ಗೆ ಪ್ರಸ್ತಾಪ ಸಲ್ಲಿಸಿದ್ದಾರೆ. ಅಂತಿಮವಾಗಿ ನಿರ್ಣಯ ಕೈಗೊಳ್ಳಲು ಒಂದಷ್ಟು ಸಮಯ ಹಿಡಿಯಬಹುದು. ಆದರೆ ಸುಶಾಂತ್‌ ಹೆಸರಿನಲ್ಲಿ ಪ್ರಶಸ್ತಿ ಆರಂಭ ಆಗುವುದು ಖಚಿತ’ ಎಂದು ಬಿಜೆಪಿ ಪಕ್ಷದವರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಕೆಲವು ನ್ಯೂಸ್‌ ಪೋರ್ಟಲ್‌ಗಳು ಸುದ್ದಿ ಪ್ರಕಟಿಸಿವೆ. ಇದನ್ನು ಕೇಳಿ ಸುಶಾಂತ್‌ ಫ್ಯಾನ್ಸ್‌ ಖುಷಿ ಆಗಿದ್ದಾರೆ.

ಇನ್ನು, ಸುಶಾಂತ್‌ ಅವರ ಜೀವನದ ಕಥೆಯನ್ನೇ ಇಟ್ಟುಕೊಂಡು ಹೊಸ ಸಿನಿಮಾ ಕೂಡ ಅನೌನ್ಸ್‌ ಆಗಿದೆ. ಈ ಚಿತ್ರಕ್ಕೆ ‘ನ್ಯಾಯ್‌’ ಎಂದು ಶೀರ್ಷಿಕೆ ಇಡಲಾಗಿದೆ. ಪ್ರಖ್ಯಾತ ಲಾಯರ್‌ ಅಶೋಕ್‌ ಸರೋಗಿ ಅವರ ಪತ್ನಿ ಸರಳಾ ಸರೋಗಿ ಅವರು ರಾಹುಲ್‌ ಶರ್ಮಾ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ದಿಲೀಪ್‌ ಗುಲಾಟಿ ನಿರ್ದೇಶನ ಮಾಡಲಿದ್ದಾರೆ. 2020ರ ಜೂನ್‌ 14ರಂದು ಸುಶಾಂತ್‌ ನಿಧನರಾದರು. ಆ ನಂತರದ ಘಟನೆಗಳನ್ನೂ ಈ ಸಿನಿಮಾ ಹೊಂದಿರಲಿದೆ ಎಂಬ ಮಾಹಿತಿ ಕೇಳಿಬಂದಿದೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...