ಸೂಪರ್ ಸ್ಟಾರ್ ರಜನಿಕಾಂತ್ ಮಗಳ ಎರಡನೇ ಮದುವೆಗೆ ಸಿದ್ದತೆ ಜೋರು..!!
ಹೌದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಎರಡನೇ ಮದುವೆಯಾಗುತ್ತಿರುವ ಬಗ್ಗೆ ಅಧಿಕೃತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.. ಇದೇ 11 ಕ್ಕೆ ಸೌಂದರ್ಯ ಎರಡನೇ ಬಾರಿ ಹಸೆಮಣೆ ಏರಲ್ಲಿದ್ದಾರೆ.. ನಟ ಹಾಗು ಉದ್ಯಮಿಯಾಗಿರುವ ವಿಷಗನ್ ವನಂಗಮುಡಿ ಎಂಬುವವರನ್ನ ಮದುವೆಯಾಗಲು ಸಿದ್ದವಾಗಿದ್ದಾರೆ..
ಎರಡು ಕುಟುಂಬಗಳು ಈ ಮ್ಯಾರೇಜ್ ಗೆ ಅಸ್ತು ಎಂದಿದ್ದು ಈಗಾಗ್ಲೇ ಮದುವೆ ತಯಾರಿ ಜೋರಾಗಿದೆ.. 9 ಹಾಗು 10 ರಂದು ಮದುವೆ ಮುಂಚಿತ ಕಾರ್ಯಕ್ರಮಗಳು ನಡೆಯಲಿದೆ.. 11 ರಂದು ಶಾಸ್ತ್ರೋಕ್ತವಾಗಿ ಮಂಗಳವಾದ್ಯಗಳ ನಡುವೆ ಹೊಸ ಜೀವನವನ್ನ ಆರಂಭಿಸಲ್ಲಿದ್ದಾರೆ ಸೌಂದರ್ಯ..
ಅಂದಹಾಗೆ ಸೌಂದರ್ಯ 2010 ಸೆಪ್ಟೆಂಬರ್ ನಲ್ಲಿ ಅಶ್ವಿನ್ ಕುಮಾರ್ ಎಂಬುವವರನ್ನ ವಿವಾಹವಾಗಿದ್ರು.. ಈ ಇಬ್ಬರಿಗೆ ವೇದಾ ಕೃಷ್ಣ ಎಂಬ ಮುದ್ದಾದ ಗಂಡು ಮಗು ಸಹ ಇದೆ.. ಸದ್ಯ ಈ ಮಗು ಸೌಂದರ್ಯ ಅವರ ಬಳಿ ಇದೆ.. ತಮ್ಮ 6 ವರ್ಷದ ದಾಂಪತ್ಯ ಜೀವನದಲ್ಲಿ ಸಾಮರಸ್ಯವಿಲ್ಲದ ಕಾರಣ ಕಳೆದ 2017ರಲ್ಲಿ ಅಧಿಕೃತವಾಗಿ ಅಶ್ವಿನ್ ಅವರಿಂದ ವಿಚ್ಛೇದನೆಯನ್ನ ಪಡೆದುಕೊಂಡಿದ್ರು..