ಸೂರಜ್ ರೇವಣ್ಣ ಪ್ರಕರಣ ಸಿಐಡಿಗೆ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

Date:

ಬೆಂಗಳೂರು: ಅಸಹಜ ಲೈಂಗಿಕ ಕಿರುಕುಳ ಆರೋಪದ ಮೇಲೆ ಜೆಡಿಎಸ್ ಎಂಎಲ್ಸಿ ಸೂರಜ್ ರೇವಣ್ಣ ಅವರ ಬಂಧನವಾಗಿದೆ. ಹಾಸನದ ಸೆನ್ ಠಾಣೆಯಲ್ಲಿ ಸೂರಜ್ ರೇವಣ್ಣ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದಲ್ಲದೆ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಸೂರಜ್ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆ ನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿತ್ತು.
ಐಪಿಸಿ ಸೆಕ್ಷನ್ 377, 342, 506, 34 ರ ಅಡಿ ಸೂರಜ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸೂರಜ್ ರೇವಣ್ಣ ಅವರನ್ನು ಹಾಸನದಲ್ಲಿ ಪೊಲೀಸರು ಬಂಧಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಇಂದು ಆಸ್ಪತ್ರೆಗೆ ಹಾಜರುಪಡಿಸಲಾಗಿದೆ.

Share post:

Subscribe

spot_imgspot_img

Popular

More like this
Related

ಮೈಸೂರು: ದಾಸವಾಳದ ದಿಂಡು ನುಂಗಿ 6 ತಿಂಗಳ ಮಗು ದುರ್ಮರಣ!

ಮೈಸೂರು: ದಾಸವಾಳದ ದಿಂಡು ನುಂಗಿ 6 ತಿಂಗಳ ಮಗು ದುರ್ಮರಣ! ಮೈಸೂರು: ದಾಸವಾಳ...

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್

ಪೆಟ್ರೋಲ್-ಡೀಸೆಲ್ ದರ ಏರಿಕೆ: ಶೆಲ್ ಬಂಕ್ʼಗಳಿಂದ ಗ್ರಾಹಕರಿಗೆ ಶಾಕ್ ಬೆಂಗಳೂರು: ನಗರದಲ್ಲಿ ಪೆಟ್ರೋಲ್...

ಹಾಲು ಕಲಬೆರಕೆಯೇ? ಮನೆಯಲ್ಲಿ ಈ 4 ಟೆಸ್ಟ್ ಮಾಡಿ ಚೆಕ್ ಮಾಡಿ

ಹಾಲು ಕಲಬೆರಕೆಯೇ? ಮನೆಯಲ್ಲಿ ಈ 4 ಟೆಸ್ಟ್ ಮಾಡಿ ಚೆಕ್ ಮಾಡಿ ಇತ್ತೀಚಿನ...

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು

ಅಣ್ಣಮ್ಮ ಹಾಡಿಗೆ ಮಚ್ಚು ಹಿಡಿದು ನೃತ್ಯ ಮಾಡಿದ್ದ ರೌಡಿಶೀಟರ್‌ ಗಳು ಜೈಲುಪಾಲು ಬೆಂಗಳೂರು:...