ಸೆಪ್ಟೆಂಬರ್ ನಲ್ಲಿ ಹಿಂದಿ ಬಿಗ್ ಬಾಸ್.. ಹೇಗಿದೆ ಗೊತ್ತಾ ಸೀಸನ್ 14ರ ಫ್ರೋಮೋ..?

Date:

ಹಿಂದಿಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಶೋಗೆ‌ ಮೂಹೂರ್ತ ಫಿಕ್ಸ್ ಆಗಿದೆ. ಲಾಕ್ ಡೌನ್ ಸಡಿಲಿಕೆಯ ನಂತರ ಇದೀಗ ಬಿಗ್ ಬಾಸ್ ಮರಳಿ‌ ಬರುತ್ತಿದ್ದು, ಈ‌ ಕಾರ್ಯಕ್ರಮಕ್ಕಾಗಿ‌ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇದೇ ಸೆಪ್ಟೆಂಬರ್ ನಿಂದ ಬಿಗ್ ಬಾಸ್ ಶೋನ ಹದಿನಾಲ್ಕನೇ ಸೀಸನ್ ಆರಂಭಗೊಳ್ಳಲಿದೆ. ಈಗಾಗಲೇ ಬಿಗ್ ಬಾಸ್ ಸೀಸನ್ ಹದಿನಾಲ್ಕರ ಫ್ರೋಮೋ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ಲಾಕ್ ಡೌನ್ ನಲ್ಲಿ ‌ಕೃಷಿಯಲ್ಲಿ ತೊಡಗಿದ್ದ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಬಿಗ್ ಬಾಸ್ ನೊಂದಿಗೆ ಎಂಟ್ರಿ ಕೊಡುತ್ತಿದ್ದಾರೆ. ಕಲರ್ಸ್ ಟಿವಿಯ ಟ್ವಿಟ್ಟರ್, ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಬಿಗ್ ಬಾಸ್ ಸೀಸನ್ ಹದಿನಾಲ್ಕರ ಫ್ರೋಮೋ ರಿಲೀಸ್ ಆಗಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಸಲ್ಮಾನ್ ಖಾನ್ ಮತ್ತು ಬಿಗ್ ಬಾಸ್ ಅಭಿಮಾನಿಗಳು ಫ್ರೋಮೋ‌ ನೋಡೆ ಫುಲ್ ಖುಷ್ ಆಗಿದ್ದಾರೆ‌.‌

ಲಾಕ್ ಡೌನ್ ನಲ್ಲಿ ಸಲ್ಮಾನ್ ಖಾನ್ ಕೃಷಿಯಲ್ಲಿ‌ ತೊಡಗಿಕೊಂಡಿದ್ದರು. ಇದೇ ವಿಡಿಯೋವನ್ನು ಬಿಗ್ ಬಾಸ್ ಸೀಸನ್ ಹದಿನಾಲ್ಕರ ಫ್ರೋಮೋದಲ್ಲಿ ಬಳಸಲಾಗಿದೆ.

ಬಿಗ್ ಬಾಸ್ ಹದಿನಾಲ್ಕನೇ ಆವೃತ್ತಿಯ ಫ್ರೋಮೋ ಆರಂಭದಲ್ಲಿ ಭತ್ತ ನಾಟಿ ಮಾಡಿ, ಟ್ರ್ಯಾಕ್ಟರ್ ಓಡಿಸುತ್ತಿದ್ದಾರೆ‌. ಜೊತೆಗೆ ಸಲ್ಮಾನ್ ಲಾಕ್ ಡೌನ್ ಸ್ಪೀಡ್ ಬ್ರೇಕರ್ ಆಗಿ ಕಾರ್ಯ ನಿರ್ವಹಿಸಿದೆ.ಹೀಗಾಗಿ ನಾನು ಭತ್ತವನ್ನು ಬೆಳೆಸಲು ಪ್ರಾರಂಭಿಸಿ, ಟ್ರಾಕ್ಟರ್ ಓಡಿಸುತ್ತಿದ್ದೀನಿ ಅನ್ನೋ ಹಿನ್ನೆಲೆ ‌ದನಿ ನೀಡಿದ್ದಾರೆ. ಕೊನೆಯಲ್ಲಿ ನೀಟ್ ಶೇವ್ ನ ಹ್ಯಾಂಡ್ ಸಮ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಸಲ್ಮಾನ್ ‘ಅಬ್ ಸೀನ್ ಪಲ್ಟೆಗಾ’ ‌ಅನ್ನೋ ಫ್ರೋಮೋ ದಾ ಡೈಲಾಗ್ ಹೇಳುತ್ತಾರೆ. ಇದರೊಂದಿಗೆ ಬಿಗ್ ಬಾಸ್ ಸೀಸನ್ 2020 ರ ಹೊಸ ಲೋಗೋ ಮೂಡಿ ಬಂದಿದ್ದು, ಸಖತ್ ಕ್ಯಾಚಿಯಾಗಿದೆ.

ಬಿಗ್ ಬಾಸ್ 14 ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮರಳಿ ಬರಲಿದೆ. ಈ ಬಾರಿಯೂ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ.
ಲಾಕ್‌ಡೌನ್ ಘೋಷಿಸುವ ಮೊದಲು ಪನ್‌ವೆಲ್‌ನಲ್ಲಿರುವ ತನ್ನ ತೋಟದ ಮನೆಯಲ್ಲಿದ್ದ ಸಲ್ಮಾನ್ ಖಾನ್‌ ಇದೀಗ ಬಿಗ್ ಬಾಸ್ ನ ಹೊಸ ಮನೆಗೆ ತೆರಳಲು ತಯಾರಾಗುತ್ತಿದ್ದಾರೆ. ಸೀಸನ್ 4 ರಿಂದ ಬಿಗ್ ಬಾಸ್ ನಡೆಸಿಕೊಡುತ್ತಿರುವ ಸಲ್ಮಾನ್ ಇದೀಗ ೧೪ ಆವೃತ್ತಿಯೊಂದಿಗೆ ಹಿಂತಿರುಗಲಿದ್ದಾರೆ.

ಈಗಾಗಲೇ ಬಿಗ್ ಬಾಸ್ ಸೀಸನ್ ೧೪ ಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ.‌ ಸದ್ಯ ಕಾರ್ಯಕ್ರಮದ‌ ತಯಾರಕರು ಬಿಗ್ಬಾಸ್ನ  ನಿರೀಕ್ಷಿತ ಸ್ಪರ್ಧಿ ಗಳೊಂದಿಗೆ ಮಾನಾಡಲು ಪ್ರಾರಂಭಿಸಿದ್ದಾರೆ. ಈಗಾಗಲೇ ‌ಬಿಗ್ ಮನೆಗೆ ಹೋಗುವ ನಿರೀಕ್ಷಿತ ಸೆಲೆಬ್ರಿಟಿಗಳ ಹೆಸರು‌ ಕೇಳಿ ಬರುತ್ತಿದೆ. ಈ ವರ್ಷವೂ ಸಾಮಾನ್ಯರಿಗೆ ಎಂಟ್ರಿ ಕೊಡದೇ ಕೇವಲ ಸೆಲೆಬ್ರಿಟಿಗಳ ತಂಡವನ್ನು ಹೊಂದಿರುತ್ತದೆ. ಕಳೆದ ಆವೃತ್ತಿಯಲ್ಲಿ ಸಿದ್ಧಾರ್ಥ್ ಶುಕ್ಲಾ ಜಯಗಳಿಸಿದ್ದರೆ, ಅಸಿಮ್ ರಿಯಾಜ್ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಬಿಗ್ ಬಾಸ್ ೧೩ ನೇ ಸೀಸನ್ ಐದು ತಿಂಗಳವರೆಗೆ ನಡೆಯಿತು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...