ಸೆಲ್ಫಿ ನೋಡಿ ಮಾಜಿ ಲವರ್ ಹತ್ಯೆಗೆ ಸ್ಕೆಚ್ ಹಾಕಿದವನ ಕಥೆ ಆಗಿದ್ದೇ ಬೇರೆ

Date:

ಆಕೆಯ ಒಂದೇ ಒಂದು ಸೆಲ್ಫಿ ಸಾವಿನತ್ತ ಕರೆದುಕೊಂಡು ಹೋಗಿತ್ತು. ಪ್ರೀತಿಸಿ ಕೈಕೊಟ್ಟ ಹುಡುಗಿ ಫೋಟೋ ನೋಡಿ ಕೊಲ್ಲಲು ಕುಡ್ಲೆ ಬೀಚ್‌ಗೆ ಬಂದಿದ್ದ ಮಾಜಿ ಪ್ರೇಮಿ ಮಾಜಿ ಪ್ರಿಯತಮೆ ಮೇಲೆ ಮಾರಣಾಂತಿಕ ಹಲ್ಲೆಮಾಡಿ ಪರಾರಿಯಾಗಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದು ಸಿನಿಮಾ ಮಾಡವಂತಹ ಹತ್ಯೆ ಯತ್ನದ ಸ್ಟೋರಿ. ಮಾಜಿ ಪ್ರೇಯಸಿಯನ್ನು ಹಿಂಬಾಲಿಸಿಕೊಂಡು ಬಂದು ಕೊಲೆಗೆ ಯತ್ನಿಸಿ, ಪರಾರಿಯಾಗಿ ವೇಷ ಬದಲಾಯಿಸಿಕೊಂಡಿದ್ದ ಆರೋಪಿಯನ್ನು ಪುಣೆಯಲ್ಲಿ ಬಂಧಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಜುಲೈ 7ರಂದು ಗೋಕರ್ಣದ ಕುಡ್ಲೆ ಬೀಚ್‌ಗೆ ಸ್ನೇಹಿತರ ಜೊತೆ ಬಂದಿದ್ದ ಹರ್ಯಾಣ ಮೂಲದ ಪ್ರವಾಸಿಯೊಬ್ಬಳ ಮೇಲೆ ಅನಾಮಿಕನೊಬ್ಬ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದಳು.
ಪ್ರಕರಣದ ಗಂಭೀರತೆ ಅರಿತ ಪೊಲೀಸರು ಆರೋಪಿಯ ಪತ್ತೆಗೆ ಮುಂದಾದರು. ತನಿಖೆ ಕೈಗೊಂಡ ಪೊಲೀಸರಿಗೆ ಈ ಪ್ರಕರಣದಲ್ಲಿ ಕುತೂಹಲಕಾರಿಯ ಕಥೆ ಇರುವುದು ತಿಳಿದಿದೆ. ಹಲ್ಲೆಗೊಳಗಾದವಳು ಹರ್ಯಾಣ ಮೂಲದ ಮಹಿಳೆಯಾದರೆ ಹಲ್ಲೆ ಮಾಡಿದಾತ ಮಹಾರಾಷ್ಟ್ರ ಪುಣೆ ಮೂಲದ ತುಷಾರ್ ಮರಾಠೆ ಎಂಬವ. ಇಬ್ಬರು ಪರಿಚಿತರಾಗಿದ್ದು, ಮಾಜಿ ಪ್ರೇಮಿಗಳು.

ಸೆಲ್ಫಿ ಜೀವಕ್ಕೆ ಸಂಚಕಾರ ತಂದಿತು; ಮಹಿಳೆ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಇರುವುದು ಮಾಜಿ ಪ್ರೇಮಿಗೆ ತಿಳಿದಿದ್ದು ಸೆಲ್ಫಿ ಮೂಲಕ. ಸೆಲ್ಫಿಯನ್ನು ಆಕೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಳು. ಇದನ್ನು ನೋಡಿದ ಮಾಜಿ ಪ್ರೇಮಿ ಗೋಕರ್ಣಕ್ಕೆ ಬಂದು ಮಾಜಿ ಪ್ರೇಯಸಿ ಇದ್ದ ಹೋಟೆಲ್‌ನಲ್ಲಿಯೇ ರೂಂ ಪಡೆದಿದ್ದ.
ಮಹಿಳೆ ಗೆಳತಿಯರು ಊಟಕ್ಕೆ ಹೋದಾಗ ರೂಂನಲ್ಲಿ ಒಬ್ಬಳೇ ಇರುವುದನ್ನು ಖಾತರಿಪಡಿಸಿಕೊಂಡು ದಾಳಿ ಮಾಡಿದ್ದ. ಹೇರ್ ಡ್ರೈಯರ್ ವೈರ್‌ನಿಂದ ಕುತ್ತಿಗೆ ಬಿಗಿದು, ಪೆನ್‌ನಿಂದ ಕಣ್ಣು ಮತ್ತು ಮುಖಕ್ಕೆ ಚುಚ್ಚಿದ್ದ. ಮುಖಕ್ಕೆ ಹೊಡೆದು, ದಿಂಬಿನಿಂದ ಉಸಿರುಗಟ್ಟಿಸಿದಾಗ ಮಹಿಳೆ ಮೂರ್ಚೆಹೋದಳು. ಆಕೆ ಸತ್ತಿದ್ದಾಳೆ ಎಂದು ಆತ ಪರಾರಿಯಾಗಿದ್ದ.
ಎಸ್ಪಿ ಶಿವಪ್ರಕಾಶ ದೇವರಾಜು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಒಂದು ಮತ್ತು ಕುಮಟಾ ಸಿಪಿಐ ಶಿವಪ್ರಕಾಶ ನಾಯ್ಕ ನೇತೃತ್ವದಲ್ಲಿ ಇನ್ನೊಂದು ತಂಡವನ್ನು ರಚಿಸಿದರು.
ತಲೆ ಬೋಳಿಸಿಕೊಂಡು, ವೇಷ ಬದಲಾಯಿಸಿಕೊಂಡಿದ್ದ ಆರೋಪಿಯನ್ನು ಪುಣೆಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸರನ್ನು ಎಸ್ಪಿ ಅಭಿನಂದಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...