ರಾಜಸ್ಥಾನ : ರೈತ ದೇಶದ ಬೆನ್ನೆಲುಬು. ಆತ ಬೆಳೆದರೆ ನಮಗೆಲ್ಲಾ ಮೂರು ಹೊತ್ತಿನ ಊಟ. ಆತ ಹೊಲದಲ್ಲಿ ಬೆವರು ಹರಿಸಿ ದುಡಿಯೋದ್ರಿಂದಲೆ ನಮ್ಮ ನಿಮ್ಮೆಲ್ಲರ ಹೊಟ್ಟೆ ಮೂರು ಹೊತ್ತು ತಂಪಾಗಿರುತ್ತೆದೆ. ಆದ್ರೆ ಅನ್ನದಾತ ಅನುಭವಿಸೋ ಕಷ್ಟಗಳಿಗೆ ಕಿವಿಗೊಟ್ಟೊರು ಯಾರೂ ಇಲ್ಲ. ಸರ್ಕಾರ ರೈತರಿಗೆ ಅನುಕೂಲವಾಗಲಿ ಎಂದು ಸಾಕಷ್ಟು ಯೋಜನೆಗಳನ್ನು ತಂದ್ರು ಅದು ಯಾವುದು ಪ್ರಯೋಜನಕ್ಕೆ ಬರುತ್ತಿಲ್ಲ. ಭರವಸೆಗಳೆಲ್ಲ ಬರಿ ಭರವಸೆಯಾಗಿ ಉಳಿದು ರೈತರ ಜೀವನ ಸಂಕಷ್ಟ ಸಿಲುಕಿದೆ.
ಸರ್ಕಾರದ ಭರವಸೆಗಳಿಗೆ ಬೇಸತ್ತು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ ಗಂಗಾನಗರ್ ಜಿಲ್ಲೆಯ ಥಕ್ರಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಸೊಹನ್ ಲಾಲ್ ಮೇಘವಾಲ್ ಮೃತ ರೈತ. ರೈತ ಸೆಲ್ಫಿ ವಿಡಿಯೋ ಮಾಡಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸೆಲ್ಫಿ ವಿಡಿಯೋ ಮಾಡಿದಲ್ಲದೆ, 2 ಪುಟದ ಡೆತ್ ನೋಡ್ ಕೂಡ ಪೊಲೀಸರಿಗೆ ಲಭ್ಯವಾಗಿದೆ.
ಡೆತ್ ನೋಟ್‌ನಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ಚುನಾವಣೆಗೂ ಮುಂಚೆ ನೀಡಿದ ಸಾಲಮನ್ನಾದ ಭರವಸೆಯನ್ನು ಈಡೇರಿಸಿಲ್ಲ ಅಂತಾ ಆರೋಪಿಸಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಬಗ್ಗೆಯೂ ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆ ಸರ್ಕಾರ ಮತ್ತು ರೈತರ ಬಗ್ಗೆ ಭಾವನಾತ್ಮಕ ಸಂದೇಶಗಳು ಡೆತ್ ನೋಟ್ನಲ್ಲಿವೆ. ಇದೀಗ ರೈತನ ವಿಡಿಯೋ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ.
ಸೆಲ್ಫಿ ವಿಡಿಯೋ ಮಾಡಿಟ್ಟು ರೈತ ಆತ್ಮಹತ್ಯೆ..
Date: