ಅತ್ಯಂತ ಕುತೂಹಲ ಮೂಡಿಸಿದ್ದ 12ನೇ ಆವೃತ್ತಿಯ ಐಪಿಎಲ್ ಮುಕ್ತಾಯ ಹಂತ ತಲುಪಿದೆ. ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಎರಡೆರಡು ವಿಶ್ವಕಪ್ ತಂದು ಕೊಟ್ಟ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಹಿಟ್ಮ್ಯಾನ್ , ಡಬಲ್ ಸೆಂಚುರಿಗಳ ಸರದಾರ ರೋಹಿತ್ ಶರ್ಮಾ ಅವರ ನೇತೃತ್ವದ ಮುಂಬೈ ಇಂಡಿಯನ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಫೈನಲ್ ಗೆ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗರಾದ ಅನಿಲ್ ಕುಂಬ್ಳೆ ಅವರು ತಮ್ಮ ನೆಚ್ಚಿನ ತಂಡವನ್ನು ಪ್ರಕಟ ಮಾಡಿದ್ದರು. ಆ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲವು ಸ್ಟಾರ್ ಆಟಗಾರರು ಇರಲಿಲ್ಲ. ಧೋನಿ ನಾಯಕ ಮತ್ತು ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ದರು. ಆದರೆ, ಇಂದು ಡ್ಯಾಶಿಂಗ್ ಓಪನರ್ ಖ್ಯಾತಿಯ ವೀರೇಂದ್ರ ಸೆಹ್ವಾಗ್ ತನ್ನ ಟೀಮ್ ಅನ್ನು ಪ್ರಕಟ ಮಾಡಿದ್ದಾರೆ. ಈ ತಂಡದಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಸ್ಥಾನವಿಲ್ಲ..! ಅದಕ್ಕಿಂತ ಹೆಚ್ಚು ಎಂದರೆ ಕುಂಬ್ಳೆ ಟೀಮ್ನಲ್ಲಿದ್ದ ನಾಯಕ ಧೋನಿಗೂ ಸೆಹ್ವಾಗ್ ಕೊಕ್ ನೀಡಿದ್ದಾರೆ.
ಧೋನಿ ಬದಲು ಸೆಹ್ವಾಗ್ ಟೀಮ್ನಲ್ಲಿ ಡೇವಿಡ್ ವಾರ್ನರ್ ಕ್ಯಾಪ್ಟನ್. ರಿಷಭ್ ಪಂತ್ ವಿಕೆಟ್ ಕೀಪರ್ ಆಗಿದ್ದಾರೆ. ಇನ್ನುಳಿದಂತೆ ಶಿಖರ್ ಧವನ್, ಜಾನಿ ಬೈಸ್ಟ್ರೋವ್, ಕೆ.ಎಲ್ ರಾಹುಲ್, ರಸೆಲ್, ಹಾರ್ದಿಕ್ ಪಾಂಡ್ಯ, ಕಾಗಿಸಾ ರಬಾಡಾ, ಬುಮ್ರಾ, ರಾಹುಲ್ ಚಹಾರ್, ಶ್ರೇಯಸ್ ಗೋಪಾಲ್ ಇದ್ದಾರೆ. 12ನೇ ಪ್ಲೇಯರ್ ಆಗಿ ಸೆಹ್ವಾಗ್ ಇಮ್ರಾನ್ ತಾಹಿರ್ ಅವರಿಗೆ ಚಾನ್ಸ್ ನೀಡಿದ್ದಾರೆ..!
ಸೆಹ್ವಾಗ್ ಕೂಡ ಕೊಹ್ಲಿಗೆ ಗೇಟ್ಪಾಸ್ ಕೊಟ್ರು..! ಕುಂಬ್ಳೆ ಟೀಮ್ನಲ್ಲಿದ್ದ ಧೋನಿಗೂ ವೀರೂ ಟೀಮ್ನಲ್ಲಿ ಜಾಗವಿಲ್ಲ..!
Date: