ಬೆಂಗಳೂರಿನ ಕಾವೇರಿ 3ನೇ ಹಂತದಲ್ಲಿ ನೀರು ಪೂರೈಸಲಾಗುವ ಸ್ಥಳಗಳಲ್ಲಿ ದಿನಾಂಕ ಸೆಪ್ಟೆಂಬರ್ 12, 2021 ಮತ್ತು ಸೆಪ್ಟೆಂಬರ್ 13, 2021ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ತಿಳಿಸಿದೆ.
ಕಾವೇರಿ 3ನೇ ಹಂತದ ಪಂಪಿಂಗ್ ಸ್ಟೇಶನ್ಗೆ ಸಂಬಂಧಪಟ್ಟ ಲೈನ್ನಲ್ಲಿ ಲೀಕೇಜ್ಗಳನ್ನು ಸರಿಪಡಿಸಲು ತುರ್ತಾಗಿ ದುರಸ್ತಿ ಮಾಡಬೇಕಾಗಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಗಾಂಧಿನಗರ, ಕುಮಾರಪಾರ್ಕ್ ಈಸ್ಟ್, ವಸಂತನಗರ, ಹೈ ಗ್ರೌಂಡ್ಸ್, ಸಂಪಂಗಿ ರಾಮನಗರ, ಸಿಕೆಸಿ ಗಾರ್ಡನ್, ಕೆ.ಎಸ್. ಗಾರ್ಡನ್, ಟೌನ್‌ಹಾಲ್, ಲಾಲ್‌ಬಾಗ್ ರಸ್ತೆಯ 1ರಿಂದ 4ನೇ ಕ್ರಾಸ್, ಲಾಲ್‌ಬಾಗ್ ರಸ್ತೆ, ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್, ಕಬ್ಬನ್ ಪೇಟೆ, ನಗರ್ತಪೇಟೆ, ಕುಂಬಾರಪೇಟೆ, ಕಾಟನ್ಪೇಟೆ, ಚಿಕ್ಕಪೇಟೆ, ಬಕ್ಷಿ ಗಾರ್ಡನ್, ಭಾರತಿ ನಗರ, ಸೇಂಟ್ ಜಾನ್ಸ್ ರೋಡ್, ಹೈನ್ಸ್ ರೋಡ್, ನಾರಾಯಣ ಪಿಳ್ಳೈ ಸ್ಟ್ರೀಟ್, ಸಂಗಮ್ ರೋಡ್, ಕಾಮರಾಜ್ ರೋಡ್, ವೀರ ಪಿಳ್ಳೈ ಸ್ಟರೀಟ್, ಇನ್ಫೆಂಟ್ರಿ ರೋಡ್, ಶಿವಾಜಿ ನಗರ, ಲಾವೆಲ್ಲೆ ರೋಡ್, ಫ್ರೇಜರ್ ಟೌನ್- ಬ್ಯಾಡರಹಳ್ಳಿ, ವಿಲಿಯಮ್ಸ್ ಟೌನ್, ಸಿಂಡ್ಲಿ ಕಾಲೋನಿ, ಎನ್.ಸಿ. ಕಾಲೋನಿಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಇದಲ್ಲದೆ ಕೋಲ್ಸ್ ರಸ್ತೆ, ಮಚಲಿಬೆಟ್ಟ, ಕಾಕ್ಸ್ ಟೌನ್, ದೊಡ್ಡಿಗುಂಟ, ಜೀವನಹಳ್ಳಿ, ವಿವೇಕಾನಂದ ನಗರ, ದೇವಿಸ್ ರಸ್ತೆ, ಕುಕ್ಸ್ ಟೌನ್, ಹಳೆಯ ಬೈಯಪ್ಪನಹಳ್ಳಿ, ನಾಗಯ್ಯನಪಾಳ್ಯ, ಸತ್ಯನಗರ, ಮಾರುತಿ ನಗರ, ಮುಸ್ಲಿಂ ಕಾಲೊನಿ, ಕುಶಾಲ್ ನಗರ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ, ನಾಗವಾರ, ಸಮಾಧಾನ ನಗರ, ಹೊಸ ಬಾಗಲೂರು, ಹಳೆ ಬಾಗಲೂರು, ಲಿಂಗರಾಜಪುರ, ಚಾಮರಾಜ ಪೇಟೆ, ಬ್ಯಾಂಕ್ ಕಾಲೊನಿ, ಶ್ರೀನಿವಾಸ ನಗರ, ಗವಿಪುರ, ಹನುಮಂತ ನಗರ, ಗಿರಿನಗರ, ಬ್ಯಾಟರಾಯನಪುರ, ರಾಘವೇಂದ್ರ ಬ್ಲಾಕ್, ಅವಲಹಳ್ಳಿ, ಮುನೇಶ್ವರ ಬ್ಲಾಕ್, ಕಾಳಿದಾಸ ಬಡಾವಣೆ, ಶ್ರೀನಗರ, ಬನಶಂಕರಿ ಮೊದಲನೇ ಹಂತ, ಯಶವಂತಪುರ, ಮಲ್ಲೇಶ್ವರ, ಕುಮಾರ ಪಾರ್ಕ್, ಜಯಮಹಲ್, ಶೇಷಾದ್ರಿಪುರಗಳಲ್ಲಿ ನೀರು ಪೂರೈಕೆ ಇರುವುದಿಲ್ಲ.