ಸೇನೆಗೆ ಸೇರಲು ಮಹಿಳೆಯರಿಗೆ ಸುವರ್ಣಾವಕಾಶ- ಇಲ್ಲಿದೆ ಸಂಪೂರ್ಣ ವಿವರ

Date:

ಪುರುಷರಿಗೆ ಮೀಸಲಾಗಿದ್ದ ಕೆಲವು ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಶಕ್ತ ಪ್ರದರ್ಶನ ನೀಡಿದ್ದಾರೆ. ನಾವು ಕೂಡ ಯಾವುದೇ ಕ್ಷೇತ್ರದಲ್ಲಿ ಆದ್ರೂ ಸರಿಯೇ ತಮ್ಮ ಛಾಪು ಮೂಡಿಸಿದ್ದಾರೆ. ಮಹಿಳೆಯರಿಗೆ ಯಾವ ಕ್ಷೇತ್ರಗಳು ನಿಷಿದ್ಧವಾಗಿಲ್ಲ. ಯುದ್ಧಭೂಮಿಯಲ್ಲಿ ಮಾತ್ರ ಮಹಿಳೆಯರ ಪಾಲ್ಗೊಳ್ಳುವಿಕೆ ಅಷ್ಟಕಷ್ಟೆ ಎನ್ನುವ ಮಾತುಗಳಿದ್ವು. ಆದ್ರೆ ಈಗ ಅದಕ್ಕು ತೆರೆ ಬಿದ್ದಿದೆ.

ಭಾರತೀಯ ಸೇನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೊಂದು ನಿರ್ಮಾಣವಾಗಲಿದ್ದು ಸೇನೆಯಲ್ಲಿ ಮಹಿಳೆಯರಿಗೂ ಕೂಡ ಉದ್ಯೋಗವಕಾಶ ದೊರಕಲಿದೆ. ಇದೇ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಸೇನೆಯಲ್ಲಿ ಉದ್ಯೋಗಾವಕಾಶ ನೀಡಲು ಆನ್ ಲೈನ್ ನಲ್ಲಿ ನೇಮಕಾತಿಗೆ ಅವಕಾಶ ನೀಡಲಾಗಿದೆ. ಇದಕ್ಕು ಮುಂಚೆ ಸೈನಿಕರ ಸಾಮಾನ್ಯ ಕರ್ತವ್ಯ ನಿಭಾಯಿಸಲು ಇದುವರೆಗೆ ಮಹಿಳೆಯರಿಗೆ ಅವಕಾಶ ಇರಲಿಲ್ಲ. ಸೇನಾ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಈ ಯೋಜನೆಗೆ ನಾಂದಿ ಹಾಡಿದ್ದರು.

ರಕ್ಷಣಾ ಇಲಾಖೆಯ ಸಮ್ಮತಿಯ ಮೇರೆಗೆ ಹೊಸ ಯೋಜನೆ ಜಾರಿಗೆ ಬಂದಿದೆ. ಸೇನೆ ಸೇರಲು ಜೂನ್ 8 ರ ಒಳಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. joinindianarmy.nic.in . ವೆಬ್ಸೈಟ್ ಮೂಲಕ ಮಹಿಳೆಯರು ಸೇನೆಯಲ್ಲಿ ಉದ್ಯೋಗಾವಕಾಶ ಪಡೆಯಲು ಅರ್ಜಿ ಸಲ್ಲಿಸಬಹುದು. ಈ ಅರ್ಜಿ ಪ್ರಕ್ರಿಯೆ ಏಪ್ರಿಲ್ 25, 2019 ರಿಂದ ಜೂನ್ 8, 2019 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆ ಎದುರಿಸಬೇಕಾಗುತ್ತದೆ. ಸೇನೆಗೆ ಸೇರುವ ಮಹಿಳೆಯರಿಗೆ ಕೆಲವು ಅರ್ಹತೆಗಳು ಇರಬೇಕಾಗುತ್ತದೆ.

ವಯಸ್ಸು ಕನಿಷ್ಠ ವಯೋಮಿತಿ 17.5 ವರ್ಷದಿಂದ, ಗರಿಷ್ಠ ವಯೋಮಿತಿ 21 ವರ್ಷ. ಕನಿಷ್ಠ ಶೇ.45 ಅಥವಾ ಅದಕ್ಕಿಂತ ಹೆಚ್ಚು ಶೇಕಡದೊಂದಿಗೆ ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು. ಪ್ರತಿ ವಿಷಯದಲ್ಲೂ ಶೇ.33 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಇನ್ನು ಅಭ್ಯರ್ಥಿಯು ಕನಿಷ್ಠ ಎತ್ತರ 142 ಸೆ.ಮೀ. ಗಿಂತ ಹೆಚ್ಚಿರಬೇಕು. ಹೆಚ್ಚು ತೂಕ ಹೊಂದಿರಬಾರದು. ಇವುಗಳ ಜೊತೆಗೆ ಕೆಲವು ಅಗತ್ಯ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.

ಅವುಗಳು ಇಂತಿವೆ
* ಪ್ರವೇಶ ಪತ್ರ (Admit card)
* ಫೋಟೋ(Photograph)
* ಎನ್ ಸಿಸಿ ಸರ್ಟಿಫಿಕೇಟ್ (NCC certificate)
* ಧರ್ಮ ಪ್ರಮಾಣಪತ್ರ(Religion certificate)
* ಶಿಕ್ಷಣ ಪ್ರಮಾಣಪತ್ರ (Education certificate)
* ವಾಸ್ತವ್ಯ ಪ್ರಮಾಣಪತ್ರ (Domicile certificate)
* ಜಾತಿ ಅಥವಾ ಪಂಗಡ ಪ್ರಮಾಣ ಪತ್ರ(Class or caste certificate)
* ನಡತೆ ಪ್ರಮಾಣಪತ್ರ(Character certificate)
* ಸಂಬಂಧದ ಪ್ರಮಾಣಪತ್ರ(Relationship certificate)
* ಶಾಲೆಯಿಂದ ನಡತೆ ಪ್ರಮಾಣಪತ್ರ(School character certificate )

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...