ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

Date:

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಇಂದು ಭಾರತೀಯ ಹವಾಮಾನ ಇಲಾಖೆ (IMD) ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ನೈರುತ್ಯ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತದಿಂದಾಗಿ ಸೈಕ್ಲೋನ್ ಉಂಟಾಗಿದ್ದು, ಇದರ ಪರಿಣಾಮವಾಗಿ ರಾಜ್ಯದ ಅನೇಕ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

30 ರಿಂದ 40 ಕಿ.ಮೀ./ಗಂಟೆ ವೇಗದ ಗಾಳಿಯೊಂದಿಗೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಜನರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.ಮುಂದಿನ ಒಂದು ವಾರದವರೆಗೆ ಬೆಂಗಳೂರಿನ ಮೇಲೆ ಸೈಕ್ಲೋನ್‌ನ ಪ್ರಭಾವ ಮುಂದುವರಿಯಲಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಈ ಪರಿಣಾಮ ತೀವ್ರಗೊಳ್ಳುವ ಸಾಧ್ಯತೆ ಇದೆ.

ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಭೀತಿ ಇರುವುದರಿಂದ ನಾಗರಿಕರು ಮುಂಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇಂದಿನ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 94 ಆಗಿದ್ದು, ದಿನವಿಡೀ ಮೋಡ ಕವಿದ ವಾತಾವರಣದೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...