ಕನಕಪುರ – ಕೊರೋನಾ ಮಹಾ ಮಾರಿಗೆ ಬಲಿಯಾದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯೆ ಡಿ.ಕೆ.ಸುರೇಶ್ ಜನರಲ್ಲಿನ ಆತಂಕವನ್ನು ಕೊಂಚಮಟ್ಟಿಗೆ ಕಡಿಮೆ ಮಾಡಲು ಮುಂದಾಗಿದ್ದಾರೆ.
ತಾಲ್ಲೂಕಿನ ಮುಳ್ಳಹಳ್ಳಿ ಗ್ರಾಮದ ಮಾಜಿ ಗ್ರಾ.ಪಂ ಉಪಾಧ್ಯಕ್ಷ ಲೋಕೇಶ್ ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಲೋಕೇಶ್ ನೆನ್ನೆ ಮೃತಪಟ್ಟಿದ್ದರು, ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕೇಶ್ ಅಂತ್ಯಕ್ರಿಯೆ ಮುಳ್ಳಿಹಳ್ಳಿ ಗ್ರಾಮದಲ್ಲಿ ನಡೆಯಿತು. ಸೋಂಕಿತನ ಅಂತ್ಯಕ್ರಿಯಿಯಲ್ಲಿ ಪಿಪಿ ಕಿಟ್ ಧರಿಸದೇ ಕೇವಲ ಪೇಶ್ಶೀಲ್ದ್ ಧರಸಿ ಸಂಸದ ಡಿ.ಕೆ.ಸುರೇಶ್ ಪಾಲ್ಗೊಂಡರು.
ಈ ಹಿಂದೆಯು ಸಹ ಸಂಸದ ಡಿ.ಕೆ.ಸುರೇಶ್ ಕೋವಿಡ್ ಅಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿ, ಕೋವಿಡ್ ರೋಗಿಗಳಿಗೆ ಹೆದರಬೇಡಿ ಚಿಕಿತ್ಸೆ ಪಡೆದು ಧೈರ್ಯದಿಂದ ಕೊರೋನಾ ಸೋಲಿಸಿ ಎಂದು ಸೋಂಕಿತರಿ ಸ್ಥೈರ್ಯ ಮೂಡಿಸಲು ಯತ್ನಿಸಿದರು.
ಹಲವು ಬಾರಿ ಕೊರೋನಾ ಸೋಂಕಿತರು ಮೃತಪಟ್ಟ ವೇಳೆ ಅವರ ಅಂತ್ಯಕ್ರಿಯೆಯಲ್ಲಿ ಬಾಗಿಯಾಗಿ ಹೆದರಬೇಡಿ ಮುಂಜಾಗ್ರತಾ ಕ್ರಮ ಕೈಗೊಂಡು ಸೋಂಕಿತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರೆ ಕೋವಿಡ್ ಸೋಂಕಿಗೆ ತುತ್ತಾಗಿವುದಿಲ್ಲ , ಸೋಂಕಿತರು ಮೃತಪಟ್ಟರೆ ಸೂಕ್ತ ರೀತಿಯಲ್ಲಿ ಅಂತಿಮ ವಿಧಿ ವಿದಾನಗಳನ್ನು ನೇರವೇರಿಸಿ ಎಂದು ಸಂಸದ ಡಿ.ಕೆ.ಸುರೇಶ್ ಸಲಹೆ ನೀಡಿದ್ದರು.