ಈಗ ಯಾರಿಗೂ ನೋಡಿದ್ರೂ ಸ್ಮಾರ್ಟ್ ಫೋನ್ ನಲ್ಲಿ ಮುಳುಗಿರ್ತಾರೆ, ಏನಿಲ್ಲಾ ಅಂದ್ರು ನಡಿಯುತ್ತೆ ಆದರೆ ಈ ಸ್ಮಾರ್ಟ್ ಫೋನ್ ಇಲ್ಲದೆ ಜೀವನ ಇಲ್ಲ ಅನ್ನೋ ಹಾಗಿದೆ,
ವಾಟ್ಸ್ ಆಪ್, ಫೇಸ್ ಬುಕ್, ಇನ್ಸ್ಟಾ ಗ್ರಾಂ ಜನರಿಗೆ ಒಂದು ರೀತಿಯ ಹುಚ್ಚು ಹಿಡಿಸಿವೆ. ಸೋಶಿಯಲ್ ಮೀಡಿಯಾ ಇಲ್ಲದೆ ಬದುಕೇ ಇಲ್ಲ ಎಂಬಂತಾಗಿದೆ ಸದ್ಯದ ಸ್ಥಿತಿ. ಆದ್ರೀಗ ಜಾಲತಾಣಗಳೇ ವಿಚ್ಛೇದನಕ್ಕೂ ಕಾರಣವಾಗ್ತಿವೆ.
ಆನ್ ಲೈನ್ ನಲ್ಲಿ ಅಫೇರ್ ಇಟ್ಟುಕೊಳ್ಳಲು ಸಾಮಾಜಿಕ ತಾಣಗಳು ಸಹಾಯ ಮಾಡ್ತಿವೆ. ಇದರಿಂದ ವಿಚ್ಛೇದನಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಆನ್ ಲೈನ್ ನಲ್ಲಿ ಒಂದೇ ಬಾರಿ 5 ಅಫೇರ್ ಇಟ್ಟುಕೊಳ್ಳಬಹುದು. ಫ್ಲರ್ಟ್ ಮಾಡಲು ಇದು ಬೆಸ್ಟ್ ಪ್ಲೇಸ್ ಆಗ್ಬಿಟ್ಟಿದೆ.
ಕಳೆದ 5 ವರ್ಷಗಳಲ್ಲಿ ವಿಚ್ಛೇದನಗಳ ಪ್ರಮಾಣ ಗಣನೀಯ ಏರಿಕೆ ಕಂಡಿದ್ದು, ಇದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು ಅನ್ನೋದು ಸಮೀಕ್ಷೆಯಿಂದ ದೃಢಪಟ್ಟಿದೆ. ಬಹುತೇಕ ಡಿವೋರ್ಸ್ ಕೇಸ್ ಗಳಿಗೆಲ್ಲ ಅಕ್ರಮ ಸಂಬಂಧವೇ ಕಾರಣ ಎನ್ನುತ್ತಾರೆ ವಕೀಲರು.
ತಂತ್ರಜ್ಞಾನದ ಅಭಿವೃದ್ಧಿ ಸಂಗಾತಿಗೆ ಸುಲಭವಾಗಿ ಮೋಸಮಾಡಲು ಸಹಕಾರಿಯಾಗ್ತಿದೆ. ಡೇಟಿಂಗ್ ವೆಬ್ ಸೈಟ್ ಗಳು ಅಕ್ರಮ ಸಂಬಂಧಕ್ಕೆ ಹಾದಿ ಮಾಡಿಕೊಡ್ತಿವೆ. ಹಾಗಾಗಿ ಸಾಮಾಜಿಕ ತಾಣಗಳನ್ನು ಸದುದ್ದೇಶಕ್ಕೆ ಬಳಸಿಕೊಂಡಲ್ಲಿ ಸಂಸಾರವನ್ನು ಕಾಪಾಡಿಕೊಂಡು ಹೋಗಬಹುದು.