ಸಹೋದ್ಯೋಗಿ ಶಿಕ್ಷಕಿ ಮೇಲೆ ಅತ್ಯಾಚಾರ ನಡೆಸಿ ಕೆಲವು ವರ್ಷಗಳಿಂದ ಅವರಿಗೆ ನಿರಂತರ ಬೆದರಿಕೆ ಒಡ್ಡುತ್ತಿದ್ದ ಶಾಲಾ ಪ್ರಿನ್ಸಿಪಾಲರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಿರುವುದು ದಕ್ಷಿಣ ದೆಹಲಿಯ ಜಸೋಲ ಶಾಲೆಯಲ್ಲಿ.
ಪ್ರಿನ್ಸಿಪಾಲ್ ಕಾಟ ತಡೆಯಲಾಗದೆ ಸಂತ್ರಸ್ತ ಶಿಕ್ಷಕಿ ಸಾವಿತ್ರಿ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ಬಳಿಕ ಆರೋಪಿ ರಾಕೇಶ್ ಸಿಂಗ್ ಎಂಬ ಕಾಮಿ ಪ್ರಿನ್ಸಿಪಾಲ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶಾಲೆಯ ಆವರಣದಲ್ಲಿಯೇ ಪ್ರಾಂಶುಪಾಲರಿಂದ ಕಳೆದ ಕೆಲವು ವರ್ಷಗಳಿಂದಲೂ ನಿರಂತರ ಅತ್ಯಾಚಾರವಾಗುತ್ತಿತ್ತು ಹಾಗೂ ಈ ಬಗ್ಗೆ ಇದನ್ನು ಯಾರಿಗೂ ಹೇಳದಂತೆ ಬೆದರಿಕೆವೊಡ್ಡುತ್ತಿದ್ದ ಎಂದೂ ಸಹ ಮಹಿಳೆ ಆರೋಪ ಮಾಡಿದ್ದಾರೆ.
2017ರ ಜೂನ್‌ನಲ್ಲಿ ಶಾಲಾ ಅವಧಿಯ ಬಳಿಕ ಸಿಂಗ್ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವಂತೆ ಶಾಲೆಗೆ ಕರೆಸಿಕೊಂಡಿದ್ದ. ನಂತರ ತನ್ನ ಆಫೀಸ್ ಕಚೇರಿಗೆ ಕರೆದುಕೊಂಡು ಹೋಗಿ ಮತ್ತು ಬರುವ ಔಷಧ ಬೆರೆಸಿದ ಪಾನೀಯ ನೀಡಿ, ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ಎಸಗಿ, ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ.. ನಿರಂತರವಾಗಿ ಇದನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ತನ್ನ ಬೇಡಿಕೆ ಈಡೇರಿಸದೇ ಯಾರಿಗಾದರೂ ತಿಳಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.
ಸ್ಪೆಷಲ್ ಕ್ಲಾಸ್ಗೆಂದು ಶಾಲೆಗೆ ಕರೆಸಿ ಶಿಕ್ಷಕಿಯ ಮೇಲೆ ಪ್ರಿನ್ಸಿಪಾಲ್ಯಿಂದ ರೇಪ್..!
Date: