ಸುದೀಪ್….ಸ್ಪರ್ಶ ಸಿನಿಮಾ ಮೂಲಕ ಚಂದನವನದಲ್ಲಿ ಗಟ್ಟಿಯಾಗಿ ನೆಲೆ ನಿಂತವರು. ಸ್ಪರ್ಶ ಮೊದಲು ಬಂದ ಒಂದೆರಡು ಸಿನಿಮಾಗಳು ಗೆಲ್ಲಲಿಲ್ಲ. ಆದರೆ, ಆ ನಂತರ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾದರು.ಹುಚ್ಚ ಸಿನಿಮಾ ಬಂದ ಮೇಲೆ ಚಂದನವನದ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದರು. ಹುಚ್ಚ ಸಿನಿಮಾದಿಂದ ಸುದೀಪ್ ಇಮೇಜೇ ಬದಲಾಗಿ ಬಿಟ್ಟಿತ್ತು. ತದನಂತರ ಸುದೀಪ್ ಹಿಂತಿರುಗಿ ನೋಡಲೇ ಇಲ್ಲ…ಅದ್ಭುತ ನಟನೆಯ ಮೂಲಕ ಕನ್ನಡ ಕಲಾಭಿಮಾನಿಗಳ ಮನದಲ್ಲಿ ಭದ್ರವಾಗಿ ನೆಲೆಯೂರಿದ ಕನ್ನಡದ ‘ಮಾಣಿಕ್ಯ’ ಪರಭಾಷೆಗಳಲ್ಲೂ ತನ್ನದೇಯಾದ ಹೆಸರುಗಳಿಸಿದ್ದಾರೆ. ಹಿಂದಿ , ತೆಲುಗು ಸೇರಿದಂತೆ ಬಹುಭಾಷಾ ನಟನಾಗಿ ಅಭಿನಯ ಚಕ್ರವರ್ತಿ ಮಿಂಚುತ್ತಿದ್ದಾರೆ. ಈ ನಡುವೆ ಬಿಗ್ ಬಾಸ್ ನಂಥಾ ಬಹು ದೊಡ್ಡ ರಿಯಾಲಿಟಿ ಶೋ, ಸಿಸಿಎಲ್ ಅಂಥಾ ಸೆಲಬ್ರಿಟಿ ಲೀಗ್ ಕ್ರಿಕೆಟ್ ಸೇರಿದಂತೆ ಸುದೀಪ್ ಸದಾ ಸುದ್ದಿಯಲ್ಲಿರುತ್ತಾರೆ..ಸುದೀಪ್ ನಮ್ಮ ಕನ್ನಡದ ಹೆಮ್ಮೆ ಎಂದು ಇಡೀ ಕರುನಾಡು, ಭಾರತವೇ ಕೊಂಡಾಡುತ್ತಿದೆ.
ಆದರೆ, ಕನ್ನಡ ಪರ ಸಂಘಟನೆಯೊಂದು ಸುದೀಪ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದೆ.
ಸುದೀಪ್ ರಮ್ಮಿ ಜಾಹಿರಾತುವಲ್ಲಿ ಕಾಣಿಸಿಕೊಂಡಿರುವುದು ಇದಕ್ಕೆ ಕಾರಣ. ಸುದೀಪ್ ಜೂಜಾಟಕ್ಕೆ ಅಸಂಖ್ಯಾ ಯುವ ಅಭಿಮಾನಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಮ್ಮಿ ಒಂದು ಜೂಜಾಟ. ಇದನ್ನು ಸುದೀಪ್ ಪ್ರಮೋಟ್ ಮಾಡ್ತಿದ್ದಾರೆ. ಈ ಮೂಲಕ ಸಹಸ್ರಾರು ಅಭಿಮಾನಿಗಳನ್ನ ಕೆಟ್ಟ ದಾರಿಗೆ ಪ್ರಚೋದಿಸುತ್ತಿದ್ದಾರೆ. ಸುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಇದನ್ನ ಅಳವಸಿಕೊಂಡರೆ ಅವರ ಜೀವನ ಹಾಳಾಗುತ್ತದೆ. ಹಾಗಾಗಿ ಸುದೀಪ್ ಜಾಹಿರಾತಿನಿಂದ ಹೊರಬರಬೇಕು ಎಂದು ಸರ್ವ ಸಂಘಟನೆ ಒಕ್ಕೂಟದ ಕಾರ್ಯಕರ್ತರು ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ.