ಸ್ಯಾಂಡಲ್‌ವುಡ್ ಸುಲ್ತಾನ, ಡಿ ಬಾಸ್ ಅಂತಾ ಕರೆಸಿಕೊಳ್ಳುವ ದರ್ಶನ್ ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೂ ತಪ್ಪಾಗಲ್ಲ. ಅಪ್ಪನ ಬಗ್ಗೆ ಇರೋ ಕ್ರೇಜ್ ಇದೀಗ ಮಗನ ಮೇಲೂ ಶುರುವಾಗಿದೆ. ಡಿಬಾಸ್ ಸಂಬಂಧಿಸಿದ ಯಾವುದೇ ಸುದ್ದಿ ಇದ್ದರೂ ಸೆನ್ಶೇಷನ್ ಕ್ರಿಯೇಟ್ ಮಾಡುತ್ತೆ. ಇದೀಗ ದರ್ಶನ್ ಅವರ ಪುತ್ರನಿಗೂ ಅಭಿಮಾನಿಗಳ ಬಳಗ ಹುಟ್ಟಿಕೊಂಡಿದೆ. ಜೊತೆಗೆ ಅಪ್ಪನಂತೆ ಎಲ್ಲದರಲ್ಲೂ ಸೈ ಅನಿಸಿಕೊಳ್ಳಲು ವಿನೀಶ್ ಸಜ್ಜಾಗುತ್ತಿದ್ದಾರೆ.
ತಮ್ಮ ತಂದೆಯ ಹಾದಿಯಲ್ಲಿ ವಿನಿಶ್ ಈಗಾಗ್ಲೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಾಗಿದೆ. ಎಸ್, ದರ್ಶನ್ ಪುತ್ರ ಬಾಲಕನಾಗಿ ನಟಿಸಿದ್ದ ವಿನೀಶ್ ಈಗ ಪ್ರಬುದ್ಧಮಾನಕ್ಕೆ ಬರ್ತಿದ್ದಾರೆ. ಸಿನಿಮಾಗಾಗಿ ಭರ್ಜರಿ ತಯಾರಿಯನ್ನ ನಡೆಸಿದ್ದಾರೆ.
ಹೌದು ವಿನೀಶ್ ಕುದುರೆ ಸವಾರಿ ಮಾಡ್ತಿದ್ದಾರೆ. ಕುದುರೆ ಸವಾರಿಯಲ್ಲಿ ಟ್ರೈನಿಂಗ್ ತೆಗೆದುಕೊಳ್ತಿದ್ದಾರೆ. ವಿನೀಶ್ ಕುದುರೆ ಓಡಿಸುವ ದೃಶ್ಯ ಈಗ ಸಖತ್ ವೈರಲ್ ಆಗಿದೆ.
ಯಾವುದೇ ಭಾಷೆಯ ಚಿತ್ರರಂಗ ತೆಗೆದುಕೊಂಡರು ಅಲ್ಲಿ ಬಹುಪಾಲು ದೊಡ್ಡ ನಟರ ಮಕ್ಕಳು ತಾವು ಕೂಡ ಹೀರೋ ಆಗುತ್ತಾರೆ. ಅದರಲ್ಲಿ ಕೆಲವರು ಗೆಲ್ಲುತ್ತಾರೆ. ಇನ್ನು ಕೆಲವರು ಸೋಲುತ್ತಾರೆ.
ಚಂದನವನದಲ್ಲೂ ಅನೇಕ ಸ್ಟಾರ್ ಗಳ ಮಕ್ಕಳು ಇಂಡಸ್ಟ್ರಿಗೆ ಬಂದಿದ್ದಾರೆ. ರಾಜ್ ಕುಮಾರ್, ಅಂಬರೀಶ್, ದೇವರಾಜ್ ಹೀಗೆ ಸ್ಟಾರ್ ಗಳ ಪುತ್ರರು ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ತಂದೆಯ ಜಾಗವನ್ನ ಸಂಪೂರ್ಣವಾಗಿ ನಿಭಾಯಿಸಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.
ಅದೇ ರೀತಿ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಹೀರೋ ಆದರು. ಇದೀಗ ದರ್ಶನ್ ಮಗ ವಿನೀಶ್ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ದರ್ಶನ್ -ವಿಜಯಲಕ್ಷ್ಮಿ ಪುತ್ರ ವಿನೀಶ್ ಚಿತ್ರರಂಗಕ್ಕೆ ಬರುವುದು ನೂರಕ್ಕೆ ನೂರರಷ್ಟು ಪಕ್ಕಾ ಆಗಿದೆ.
ಯಾಕಂದರೆ, ನಟ ದರ್ಶನ್ ಅವರೇ ಈ ಹಿಂದೆ ಮಾತನ್ನು ಹೇಳಿದ್ದರು. ಜೂನಿಯರ್ ಚಾಲೆಂಜಿಂಗ್ ಸ್ಟಾರ್ ವಿನೀಶ್ ಈಗ ಆ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿನೀಶ್ ಸಹ ನಟನೆಯ ಮೇಲೆ ಆಸಕ್ತಿ ಹೊಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಸದಾ ಅಪ್ಪನನ್ನು ಫಾಲೋ ಮಾಡೋ ವಿನೀಶ್ ತಂದೆಯಂತೆ ಅಭಿಮಾನಿಗಳ ಜೊತೆಗೆ ಬೆರೆಯುತ್ತಾರೆ. ಇದೀಗ ಸಿನಿಮಾಗೆ ಬೇಕಾದಂತ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕರಾಟೆ ಕಲಿಯುತ್ತಿರುವ ವಿನೀಶ್ ಇದೀಗ ಕುದುರೆ ಸವಾರಿ ತಾಲೀಮು ನಡೆಸುತ್ತಿದ್ದಾರೆ.
ಈಗಾಗಲೇ ದರ್ಶನ್ ಪುತ್ರ ವಿನೀಶ್, ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದು ಎರಡು ಸಿನಿಮಾದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಎಸ್, ‘ಐರಾವತ’ ಚಿತ್ರದಲ್ಲಿ ಅಪ್ಪನ ಜೊತೆಗೆ ಪೊಲೀಸ್ ಡ್ರೆಸ್ ಹಾಕಿ ಮಿಂಚಿದ್ದ ವಿನೀಶ್, ‘ಯಜಮಾನ’ ಸಿನಿಮಾದ ಶಿವನಂದಿ ಹಾಡಿನಲ್ಲಿಯೂ ಬಂದು ಹೋಗುತ್ತಾರೆ. ಈಗ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗ್ತಿದ್ದಾರೆ. ಕುದುರೆ ಸವಾರಿ ಕಲಿಯುತ್ತಿದ್ದಾರೆ. ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ವಿನೀಶ್ ಗೆ ಕುದುರೆ ಸವಾರಿ ಹೇಳಿಕೊಡುತ್ತಿದ್ದಾರೆ.