ಮೊದಲ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ‘ವಜ್ರಕಾಯ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದವರು ನಭಾ.. ನಭಾ ನಟೇಶ್ ಸ್ಯಾಂಡಲ್ ವುಡ್ ನ ಜೂನಿಯರ್ ಮಂಜುಳ. ಪಟಾಕ ನಟನೆಯಿಂದ ಮನೆಮಾತಾಗಿದ್ದ ಬೋಲ್ಡ್ ಸುಂದರಿ. ಸಾಹೇಬ, ಲೀ ಸಿನಿಮಾಗಳಲ್ಲಿ ನಟಿಸಿದ್ರು. ಈಗ ನಭಾ ತೆಲುಗು ಇಂಡಸ್ಟ್ರಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ತೆಲುಗಿನ ಅಧುಗೋ ಸಿನಿಮಾದಲ್ಲಿ ನಟಿಸ್ತಿದ್ದಂತೆ ನಭಾಗೆ ಟಾಲಿವುಡ್ನಲ್ಲಿ ಆಫರ್ ಗಳು ಸಾಲುಗಟ್ಟಿ ಬರ್ತಿವೆ.
ತೆಲುಗಿನಲ್ಲಿ ಮೊದಲ ಚಿತ್ರ ಬಿಡುಗಡೆ ಮೊದಲೇ ನಭಾಗೆ ಟಾಲಿವುಡ್ನಲ್ಲಿ ನಾಲ್ಕು ಸಿನಿಮಾಗಳಲ್ಲಿ ಚಾನ್ಸ್ ಸಿಕ್ಕಿದೆಯಂತೆ.
ತೆಲುಗು ಚಿತ್ರನಿರ್ಮಾಪಕ ಪುರಿ ಜಗನ್ನಾಥ್ ಇತ್ತೀಚೆಗೆ ಅವರ ಚಿತ್ರವಾದ ‘ಇಸ್ಮಾರ್ಟ್ ಶಂಕರ್’ ಅನ್ನು ಘೋಷಿಸಿದ್ದಾರೆ, ಈ ಚಿತ್ರದಲ್ಲಿ ರಾಮ್ ಪೊಥಿನೆನಿ ಪ್ರಮುಖ ಪಾತ್ರದಲ್ಲಿದ್ದಾರೆ. ಈಗ ಕನ್ನಡ ಚಿತ್ರರಂಗದ ಬ್ಯೂಟಿ, ನಭಾ ನಟೇಶ್ ಅವರು ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇದು ಜುಲೈನಲ್ಲಿ ಬಿಡುಗಡೆಯಾಗಲಿದೆ.
ಇತ್ತ ಪಟಾಕಳನ್ನ ತಮಿಳು ಚಿತ್ರರಂಗ ಕೂಡ ಕೈಬೀಸಿ ಕರೆಯುತ್ತಿದೆ. ಹೀಗಾಗಿ ಕನ್ನಡದಲ್ಲಿ ಸಧ್ಯಕ್ಕೆ ನಭಾ ಯಾವ ಚಿತ್ರಕ್ಕು ಸಹಿ ಹಾಕ್ತಿಲ್ವಂತೆ. ಆದ್ರೆ ನಭಾ ಚಂದನವನದಿಂದ ದೂರ ಏನ್ ಆಗಿಲ್ಲ, ಬಟ್ ಒಳ್ಳೆ ಕತೆಗೆ ಕಾಯ್ತಿದ್ದಾರಂತೆ ಅಷ್ಟೆ.