ಸ್ವಯಂ ನಿವೃತ್ತಿ ಘೋಷಿಸಿದ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

0
40

ಬೆಂಗಳೂರು ಮಹಾನಗರದ ಮಾಜಿ ಪೊಲೀಸ್ ಆಯುಕ್ತರು ಮತ್ತು ಹಾಲೀ ರೈಲ್ವೆ ಎಡಿಜಿಪಿಯಾಗಿರುವ ಭಾಸ್ಕರ್ ರಾವ್ ಅವರು ಸ್ವಯಂ ನಿವೃತ್ತಿ ಘೋಷಣೆ ಮಾಡಿ, ಹುದ್ದೆಯಿಂದ ನಿವೃತ್ತಿಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಪೊಲೀಸ್​​ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸ್ವಯಂನಿವೃತ್ತಿಗಾಗಿ ಅರ್ಜಿಯನ್ನು ಭಾಸ್ಕರ್ ರಾವ್ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ವೈಯಕ್ತಿಕ ಕಾರಣ ಎಂದು ಭಾಸ್ಕರ್ ರಾವ್ ಬರೆದಿದ್ದು, ರಾಜ್ಯ ಸರಕಾರ ಇವರ ಅರ್ಜಿಗೆ ಒಪ್ಪಿಗೆ ಸೂಚಿಸುವ ತನಕ ಇವರು ಎಡಿಜಿಪಿಯಾಗಿ ಮುಂದುವರಿಯಬೇಕಿದೆ.

ತಮ್ಮ ಸೇವಾ ಅವಧಿ ಇನ್ನು ಮೂರು ವರ್ಷ ಇರುವ ಮುನ್ನವೇ ಭಾಸ್ಕರ್ ರಾವ್, ಸ್ವಯಂನಿವೃತ್ತಿ ಘೋಷಿಸಿದ್ದು, ರಾಜ್ಯ ಐಪಿಎಸ್ ವಲಯದಲ್ಲಿ ಸಂಚಲನ ಮೂಡಿಸಿದೆ ಮತ್ತು ಇವರ ಮುಂದಿನ ನಡೆಯ ಬಗ್ಗೆ ಹಲವು ಊಹಾಪೋಹ ಸುದ್ದಿಗಳು ಹೊರಬೀಳುತ್ತಿವೆ. ಕೊರೊನಾ ಮೊದಲನೆಯ ಅಲೆಯ ವೇಳೆ ನಗರದ ಆಯುಕ್ತರಾಗಿ ಭಾಸ್ಕರ್ ರಾವ್ ಅವರು ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದ್ದರು. ಅದರಲ್ಲೂ, ವಲಸೆ ಕಾರ್ಮಿಕರ ಸಮಸ್ಯೆಗಳನ್ನು ದಕ್ಷತೆಯಿಂದ ನಿಭಾಯಿಸಿದ್ದರು. ಇವರ ಸ್ವಯನಿವೃತ್ತಿ ಅರ್ಜಿಗೆ ಡಿಜಿಪಿ ಪ್ರವೀಣ್ ಸೂದ್ ಅವರಿಂದ ಒಪ್ಪಿಗೆ ಸಿಕ್ಕಿದರೂ, ಸರಕಾರದ ಮಟ್ಟದಲ್ಲಿ ಇದು ಕ್ಲಿಯರೆನ್ಸ್ ಪಡೆಯಬೇಕಾಗುತ್ತದೆ.

 

 

LEAVE A REPLY

Please enter your comment!
Please enter your name here