ಸ್ವರ ಸಾಮ್ರಾಟ,, ಸಂಗೀತ ಕ್ಷೇತ್ರದ ದಿಗ್ಗಜ,, ದೇಶ ಕಂಡ ಮಹಾನ್ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಎಸ್ ಪಿಬಿ ಅವರ ಆರೋಗ್ಯ ಸ್ಥಿತಿ ಗಂಭೀರ ಎಂದು ವೈದ್ಯರು ಹೇಳಿದ್ದರು. ಇದೀಗ ಎಸ್ ಪಿ ಬಿ ಆರೋಗ್ಯ ಸುಧಾರಿಸುತ್ತಾ ಬರುತ್ತಿದೆ.
ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಇದೀಗ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಸರಾಗವಾಗಿ ಉಸಿರಾಟ ಆರಂಭಿಸಿದ್ದಾರೆ ಎಂದು ಎಜಿಎಂ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
నాన్నగారు డాక్టర్స్ ను గుర్తు పడుతున్నారు. కండిషన్ బెటర్ అయ్యింది.
Dad is looking good. He is able to recognise people. My mom is doing better and she could be discharged soon.
SP Charan about #SPBalasubraniam gari health #SPB @charanproducer pic.twitter.com/sHXZwnk1I9
— BA Raju's Team (@baraju_SuperHit) August 16, 2020
ಎಜಿಎಂ ಆಸ್ಪತ್ರೆಯ ಐಸಿಯುನ ಆರನೇ ಮಹಡಿಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ವಿಶೇಷವೆಂದರೆ ಸಂಗೀತ ಥೆರಫಿ ಮೂಲಕ ಟ್ರೀಟ್ ಮೆಂಟ್ ಕೊಡಲಾಗುತ್ತಿದೆ. ಸುಮಾರು 50ಸಾವಿರಕ್ಕೂ ಹಾಡುಗಳನ್ನು ಹಾಡಿರುವ ಬಾಲಸುಬ್ರಹ್ಮಣ್ಯಂ ಅವರ ಕೋಟ್ಯಂತರ ಮಂದಿಯ ಮನೋವ್ಯಥೆಯನ್ನು ನಿವಾರಿಸಿದ್ದಾರೆ. ಇದೀಗ ಅವರ ಆರೋಗ್ಯಕ್ಕೆ ಇವೇ ಹಾಡುಗಳು ಅಮೃತಪಾನದಂತಾಗಿವೆ.
ಹೌದು, ಕೊರೊನಾ ಸೋಂಕಿಗೆ ಒಳಗಾಗಿರುವ ಬಾಲಸುಬ್ರಹ್ಮಣ್ಯಂ ಅವರಿಗೆ ವೈದ್ಯರು ವಿಶೇಷ ಚಿಕಿತ್ಸೆ ನೀಡುತ್ತಿದ್ದಾರೆ. ಅವರದ್ದೇ ಹಾಡುಗಳಿಂದ ಅವರ ರೋಗ ನಿವಾರಣೆ ಮಾಡುತ್ತಿದ್ದಾರೆ. ಎಸ್ ಪಿ ಬಿ ಹಾಡಿರುವ ಭಕ್ತಿಗೀತೆ, ಭಾವಗೀತೆಗಳನ್ನು ಕೇಳಿಸುವ ಮೂಲಕ ವೈದ್ಯರಿಂದ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಹಾಡಿನ ಥೆರಪಿಯಿಂದ ಮತ್ತಷ್ಟು ಚೇತರಿಸಿಕೊಳ್ಳುತ್ತಿದ್ದಾರಂತೆ ಎಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆ ಪತ್ನಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿಸಿದಾಗ ಕಣ್ಣುಬಿಟ್ಟು ನೋಡಿದರು ಎಂದು ಮಗ ಚರಣ್ ತಿಳಿಸಿದ್ದಾರೆ. ಅಷ್ಟೇ ಅಲ್ಲ ಲಕ್ಷಾಂತರ ಅಭಿಮಾನಿಗಳು ಪೂಜೆ ಮತ್ತು ಶುಭ ಆರೈಕೆ ಮೂಲಕ ಎಸ್‌ಪಿಬಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ
ಅವರ ಪತ್ನಿಯು ಸಹ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಅವರಿಗೂ ಸಹ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ತೀವ್ರ ನಿಗಾಘಟಕದಲ್ಲಿದ್ದ ಅವರನ್ನು ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪುತ್ರ ಎಸ್‌ಪಿ ಚರಣ್ ಹೇಳಿದ್ದಾರೆ.
ಇನ್ನೂ, ಸಂಗೀತ ಸಾಮ್ರಾಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಬೇಗ ಚೇತರಿಸಿಕೊಳ್ಳಲಿ ಅಂತ ಸೂಪರ್ ಸ್ಟಾರ್ ರಜನಿಕಾಂತ್ ಹಾರೈಸಿದ್ದಾರೆ. ಟ್ವಿಟ್ಟರ್ ನಲ್ಲಿ ವಿಡಿಯೋ ಹಾಕಿರುವ ತಲೈವಾ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಅಪಾಯದಿಂದ ಪಾರಾಗಿದ್ದಾರೆ. ಆದಷ್ಟು ಬೇಗ ಅವರು ಗುಣಮುಖರಾಗಲಿ ಎಂದಿದ್ದಾರೆ.
Get well soon dear Balu sir pic.twitter.com/6Gxmo0tVgS
— Rajinikanth (@rajinikanth) August 17, 2020
‘ಬಾಲು ಸಾರ್ ಆದಷ್ಟು ಬೇಗ ಗುಣಮುಖರಾಗಿರಿ’ಎಂದು ಟ್ವೀಟ್ ಮಾಡಿದ್ದು, ಎಸ್‌ಪಿಬಿ ಅಪಾಯದಿಂದ ಪಾರಾಗಿದ್ದಾರೆ ಎಂಬ ವಿಷಯ ನನಗೆ ತುಂಬಾ ಸಂತೋಷವನ್ನು ತಂದುಕೊಟ್ಟಿದೆ. ಕಳೆದ 50 ವರ್ಷಗಳಿಂದ ಬಾಲಸುಬ್ರಹ್ಮಣ್ಯಂ ಅವರು ಹಲವು ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ತಮ್ಮ ಸುಮಧುರ ಧ್ವನಿಯಿಂದ ಕೋಟ್ಯಂತರ ಜನರ ಮುಖದಲ್ಲಿ ಹರುಷ ತಂದಿದ್ದಾರೆ’ ಎಂದು ರಜನಿಕಾಂತ್ ಅವರು ಟ್ವೀಟ್ ಮಾಡಿದ್ದಾರೆ.
ದಿನದಿಂದ ದಿನಕ್ಕೆ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚೇತರಿಕೆ ಕಾಣುತ್ತಿದೆ. ವೈದ್ಯರು ಸಹ ವಿಶೇಷ ಚಿಕಿತ್ಸೆ ಕೊಡುತ್ತಿದ್ದಾರೆ. ಜೊತೆಗೆ ಕೋಟ್ಯಂತರ ಅಭಿಮಾನಿಗಳು ಎಸ್ ಪಿಬಿ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.