ಇಂಡಿಯಾ – ಪಾಕಿಸ್ತಾನದ ವಿಶ್ವಕಪ್ ಪಂದ್ಯದ ನಂತರ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ವಿರುದ್ಡ ಕೆಟ್ಟದಾಗಿ ಭಾರಿ ಟ್ರೋಲ್ ಆಗಿದ್ದರು
ಇದೀಗ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ತಮ್ಮ ಪುತ್ರನೊಂದಿಗೆ ಶಾಪಿಂಗ್ ಗೆ ಹೋಗಿದ್ದಾಗ ಪಾಕ್ ಅಭಿಮಾನಿಯೊಬ್ಬ ಹಂದಿ ಎಂದು ಹೀಯಾಳಿಸಿದ್ದಾರೆ.
ಸರ್ಫರಾಜ್ ಮಾಲ್ ನಲ್ಲಿ ಶಾಪಿಂಗ್ ಗೆ ಹೋಗುತ್ತಿದ್ದಾಗ ಅಭಿಮಾನಿಯೊಬ್ಬ ಸೆಲ್ಫಿಗಾಗಿ ಸರ್ಫರಾಜ್ ರನ್ನು ಕೇಳಿಕೊಳ್ಳುತ್ತಾನೆ. ಜೊತೆಯಲ್ಲಿ ಪುತ್ರನಿದ್ದ ಕಾರಣ ಸರ್ಫರಾಜ್ ಸೆಲ್ಫಿಗೆ ನಿರಾಕರಿಸುತ್ತಾರೆ. ಇದರಿಂದ ಕೋಪಗೊಂಡ ಅಭಿಮಾನಿ ಸರ್ಫರಾಜ್ ರನ್ನು ನಿಂದಿಸಲು ಪ್ರಾರಂಭಿಸುತ್ತಾನೆ.
ನೀವು ಯಾಕೆ ಹಂದಿಯಂತೆ ದಪ್ಪಗಿದ್ದೀರಾ ಎಂದು ಸಾರ್ವಜನಿಕರ ಸಮ್ಮುಖದಲ್ಲೇ ಸರ್ಫರಾಜ್ ರನ್ನು ನಿಂದಿಸುತ್ತಾನೆ. ಈ ವೇಳೆ ಸರ್ಫರಾಜ್ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೆ ತೆರಳಿದ್ದಾರೆ.
A shameful act by a Pakistani fan with captain Sarfaraz Ahmed, this is how we treat our National Heros. Highly condemnable!! ? pic.twitter.com/WzAj0RaFI7
— Syed Raza Mehdi (@SyedRezaMehdi) June 21, 2019