ಬಾಲಿವುಡ್ ನ ಖ್ಯಾತ ಖಳ ನಟನಿಗೆ ಗೂಗಲ್ ಡೂಡಲ್ ‘ಗೌರವ’ .

Must read

ಬಾಲಿವುಡ್ ನ ಯಶಸ್ವಿ ಚಿತ್ರ ‘ಮಿಸ್ಟರ್ ಇಂಡಿಯಾ’ದಲ್ಲಿ ಮೊಗ್ಯಾಂಬೋ ಪಾತ್ರ ಮಾಡಿದ ಅಮರೀಶ್ ಪುರಿ ಯಾರಿಗೆ ನೆನಪಿಲ್ಲ ಹೇಳಿ. ಈ ಚಿತ್ರದಲ್ಲಿ ಅವರ ‘ಮೊಗ್ಯಾಂಬೋ ಖುಷ್ ಹುವಾ’ ಎಂಬ ಡೈಲಾಗ್ ಭಾರೀ ಜನಪ್ರಿಯತೆ ಪಡೆದುಕೊಂಡಿತ್ತು.

ಇಂದು ಅಮರೀಶ್ ಪುರಿ ಅವರ 87ನೇ ಜನ್ಮ ದಿನವಾಗಿದ್ದು, ಈ ಸಂದರ್ಭದಲ್ಲಿ ಗೂಗಲ್ ತನ್ನ ಡೂಡಲ್ ಮೂಲಕ ಖ್ಯಾತ ನಟನಿಗೆ ಗೌರವ ಅರ್ಪಿಸಿದೆ. ಕನ್ನಡವೂ ಸೇರಿದಂತೆ ಹತ್ತಕ್ಕೂ ಅಧಿಕ ಭಾಷೆಗಳಲ್ಲಿ ಅಮರೀಶ್ ಪುರಿ ಅಭಿನಯಿಸಿದ್ದು, ತಮ್ಮ 70ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

ಪಂಜಾಬಿನಲ್ಲಿ ಜೂನ್ 22, 1932 ರಂದು ಜನಿಸಿದ್ದ ಅಮರೀಶ್ ಪುರಿ, ತಮ್ಮ 39ನೇ ವಯಸ್ಸಿನಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. ತಮ್ಮ ಅಂತಿಮ ದಿನದವರೆಗೂ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಅಮರೀಶ್ ಪುರಿ ನಾನೂರಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

- Advertisement -spot_img

More articles

- Advertisement -spot_img

Latest article