ಹಾಸನ : ಮಾಜಿ ಸಚಿವ ಹೆಚ್ ಡಿ ರೇವಣ್ಣ ಕಾಂಗ್ರೆಸ್ ಹಾಗೂ ಅನರ್ಹ ಶಾಸಕರ ವಿರುದ್ಧ ಗುಡುಗಿದ್ದಾರೆ ಅಲ್ಲದೆ ಬಿಜೆಪಿ ವಿರುದ್ಧವೂ ಕೆಂಡಾಮಂಡಲರಾಗಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಜೋಳ ಖರೀದಿ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದರೆ ಡಸ್ಟ್ಬಿನ್ಗೆ ಹಾಕ್ತಾರೆ. ಸಮ್ಮಿಶ್ರ ಸರ್ಕಾರವನ್ನು ಯಾರು ತೆಗೆದರೋ ಅವರಿಗೆ ಕಾಮಗಾರಿ ನೀಡುತ್ತಿದ್ದಾರೆ. ಇವ್ರೆಲ್ಲಾ ಹಗಲು ಯಡಿಯೂರಪ್ಪ ಜೊತೆ, ರಾತ್ರಿ ಹೊತ್ತು ಕಾಂಗ್ರೆಸ್ಸಲ್ಲಿರ್ತಾರೆ. ಬಿಜೆಪಿ ಜೊತೆ ಒಳ ಒಪ್ಪಂದವನ್ನು ಯಾರು ಮಾಡಿಕೊಂಡಿದ್ದಾರೆನ್ನುವುದನ್ನು ತುಮಕೂರು, ಮಂಡ್ಯ ಜನತೆಗೆ ಕೇಳಿದ್ರೆ ಗೊತ್ತಾಗುತ್ತೆ ಎಂದರು.
ನಮ್ಮ ಪಕ್ಷದ ಏಳು ಜನ ಶಾಸಕರನ್ನು ಏನು ಮಾಡಿದರು ಎನ್ನುವುದು ಗೊತ್ತಿದೆ. ಸೆಕ್ಯೂಲರ್ ಪಾರ್ಟಿಯನ್ನು ಎಲ್ಲಿ ಕೊಲ್ಲಬೇಕೋ ಅಲ್ಲಿ ಕೊಂದರು. ಬಳಿಕ ನಮ್ಮನ್ನೇ ತಬ್ಬಿಕೊಂಡು 5 ವರ್ಷ ನೀವೇ ಆಡಳಿತ ಮಾಡ್ಬೇಕು ಎಂದಿದ್ದರು ಎಂದ ರೇವಣ್ಣ, ಕೋಮುವಾದಿ ಪಕ್ಷ ದೂರವಿಡಲು ಸೆಕ್ಯೂಲರ್ ಪಾರ್ಟಿ ಒಂದಾಗಬೇಕು ಎನ್ನುವ ಕಾಂಗ್ರೆಸ್ ಪಕ್ಷದವರು ಸೆಕ್ಯೂಲರ್ ಪಾರ್ಟಿ ಒಡೆಯುವ ಕೆಲಸ ಮಾಡ್ತಿದ್ದಾರೆ ಎಂದು ಸಿಡಿದರು.
ಬಿಜೆಪಿಗೆ ಜೆಡಿಎಸ್ ಬರೆದುಕೊಟ್ಟಿಲ್ಲ. ನಾವು ಬಿಜೆಪಿ ಬೆಂಬಲಿಸುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಈಗ ನೆರೆ ಹಾವಳಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ.ಎರಡು ರಾಜಕೀಯ ಪಕ್ಷಗಳು ಹೊಡೆದಾಡಿಕೊಂಡು ಸರ್ಕಾರ ಹೋಗುವುದಾದರೆ ಹೋಗಲಿ ಎಂದರು.
`ಹಗಲು ಯಡಿಯೂರಪ್ಪ ಜೊತೆ, ರಾತ್ರಿ ಕಾಂಗ್ರೆಸ್ ಜೊತೆ’..!
Date: