ಹಜ್ ಯಾತ್ರೆಗೆ ಸಬ್ಸಿಡಿ ನೀಡಲ್ಲ ಎಂದ ಸರ್ಕಾರ..!!
ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿ ಹೋಗಿದೆ.. ಹೀಗಾಗೆ ತನ್ನ ಪ್ರಜೆಗಳಿಗೆ ನೀಡುತ್ತಿರುವ ಹಲವು ಸವಲತ್ತುಗಳನ್ನು ಹಿಂಪಡೆಯುತ್ತಿದ್ದು ಆ ಮೂಲಕ ಹಣವನ್ನ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದೆ.. ಇದರ ಅಂಗವಾಗಿಯೇ ಪಾಕಿಸ್ತಾನ ಸರ್ಕಾರ ಹಜ್ ಸಬ್ಸಿಡಿಯನ್ನ ರದ್ದುಗೊಳಿಸುವ ಮೂಲಕ ಬೊಕ್ಕಸಿಗೆ ಹೊರಯಾಗುತ್ತಿದ್ದ 450 ಕೋಟಿ ರು ಉಳಿತಾಯ ಮಾಡಲು ಮುಂದಾಗಿದೆ..
ಈ ಬಗ್ಗೆ ಅಲ್ಲಿನ ಧಾರ್ಮಿಕ ಹಾಗು ಆಂತರಿಕ ನಂಬಿಕೆಯ ಸಾಮರಸ್ಯ ಸಚಿವ ನೂರುಲ್ ಹಕ್ ಖಾದ್ರಿ ಖಚಿತ ಪಡೆಸಿದ್ದಾರೆ.. ಈ ಹಿಂದೆ ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬರಿಗು 42 ಸಾವಿರ ರು ಸಬ್ಸಿಡಿ ನೀಡುತ್ತಿತ್ತು..