ಬಾಳೆಹಣ್ಣಿಗೆ ಭಾರತೀಯ ಸಂಸ್ಕೃತಿಗೆ ವಿಶೇಷವಾದ ಸ್ಥಾನಮಾನ ಇದೆ. ದೇವರಿಗೂ ನೈವಿದ್ಯೆಯಾಗಿ ಇಡಲಾಗುತ್ತೆ. ಈ ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಎಲ್ಲಾರಿಗೂ ತಿಳಿದಿರುವ ವಿಷಯವೇ. ಬಹುಶಃ ವಿಶ್ವದಾದ್ಯಂತ ಅತಿ ಹೆಚ್ಚು ಜನ ಸೇವಿಸುವ ಹಣ್ಣೂ ಕೂಡ ಇದಾಗಿದೆ. ಶಕ್ತಿ ಸಮೃದ್ಧವಾಗಿರುವ ಈ ಹಣ್ಣು ಇತರೆ ಹಣ್ಣುಗಳಿಗೆ ಹೋಲಿಸಿದರೆ ಕಡಿಮೆ ದರದಲ್ಲಿ ಸಿಗುತ್ತದೆ. ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ ಎಂದು ಅದನ್ನು ಸೇವಿಸುವ ನಾವು, ಬಾಳೆ ಹಣ್ಣಿನ ಸಿಪ್ಪೆಯನ್ನು ಮಾತ್ರ ಎಸೆದು ಬಿಡುತ್ತೇವೆ. ಆದರೆ ಬಾಳೆಹಣ್ಣಿಗಿಂತ ಸಿಪ್ಪೆಯಲ್ಲೇ ಹಲವು ಪ್ರಯೋಜನಗಳಿವೆ ಗೊತ್ತಾ..?
ಹೌದು..ಬಾಳೆಹಣ್ಣಿನ ಸಿಪ್ಪೆಯು ನಿಮ್ಮ ಚರ್ಮವನ್ನು ಹೈಡ್ರೀಕರಿಸುವಂತೆ ಮಾಡುತ್ತದೆ. ಬಾಳೆ ಸಿಪ್ಪೆಗೆ ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಾಕಿ 5 ನಿಮಿಷದ ನಂತರ ಅದನ್ನು ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.
ಸೋರಿಯಾಸಿಸ್ ಪೀಡಿತ ಪ್ರದೇಶದಲ್ಲಿ ಸಿಪ್ಪೆ ಅನ್ವಯಿಸಿ. ಬಾಳೆಹಣ್ಣು ಸಿಪ್ಪೆ ತೇವಾಂಶವುಳ್ಳ ಗುಣಲಕ್ಷಣಗಳು ಇರುವುದರಿಂದ ತ್ವರಿತವಾಗಿ ಸೋರಿಯಾಸಿಸ್ ಗುಣಪಡಿಸುತ್ತದೆ.
ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುವಲ್ಲಿ ಬಾಳೆ ಸಿಪ್ಪೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲಾ ಪೊಟ್ಯಾಸಿಯಂ ಮತ್ತು ವಿಟಮಿನ್ ಗಳ ಮಹಾಸಾಗರವೇ ಬಾಳೆಹಣ್ಣಿನಲ್ಲಿದೆ. ಇದಲ್ಲದೆ ಬಾಳೆಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳು ಇರುವುದರಿಂದ ದೇಹಕ್ಕೆ ಬಹಳ ಮುಖ್ಯವಾಗಿದೆ.
ಪ್ರತಿ ದಿನ ಒಂದು ಬಾಳೆಹಣ್ಣನ್ನು ತಿನ್ನುತ್ತಾ ಬಂದರೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಹಣ್ಣಿಗಿಂತ ಸಿಪ್ಪೆಯಲ್ಲೇ ಪ್ರಯೋಜನಗಳು ಜಾಸ್ತಿ..!
Date: