ಹನುಮಂತ ಬದಲು ಬೇರೆ ಅವರು ಗೆಲ್ಬೇಕಿತ್ತು: ತ್ರಿವಿಕ್ರಮ್ ತಾಯಿಯ ಬೇಸರದ ಮಾತು!
ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆಗಿ ಹನುಮಂತ ಲಮಾಣಿ ಹೊರ ಹೊಮ್ಮಿದ್ದಾರೆ. ತ್ರಿವಿಕ್ರಮ್ ಅವರು ಮೊದಲ ರನ್ನರಪ್ ಆಗಿದ್ದಾರೆ.
ಆದ್ರೆ ಮಗನ ಸೋಲಿನ ಹತಾಶೆಯಲ್ಲಿ ಇರುವ ತ್ರಿವಿಕ್ರಮ್ ತಾಯಿ ವನಜಾಕ್ಷಿ ನೀಡಿದ ಹೇಳಿಕೆ ಭಾರೀ ವೈರಲ್ ಆಗಿದೆ. ಮಗ ಗೆಲ್ಲಬೇಕು ಎಂಬ ಆಸೆ ಇತ್ತು. ನನ್ನ ಮಗ ಕಪ್ ಗೆಲ್ಲಲಿಲ್ಲ ಅಂದರೂ ಜನರ ಪ್ರೀತಿ ಗೆದ್ದಿದ್ದಾನೆ. ನನ್ನ ಮಗನಿಗೆ ಸ್ವಾರ್ಥ ಇಲ್ಲ. ಒಳ್ಳೆಯ ಮನಸ್ಸಿನಿಂದ ಜನರ ಮನಸ್ಸು ಗೆದ್ದಿದ್ದಾನೆ’’ ಅಂತ ತ್ರಿವಿಕ್ರಮ್ ತಾಯಿ ವನಜಾಕ್ಷಿ ಹೆಮ್ಮೆ ಪಟ್ಟಿದ್ದಾರೆ.
ಅಕ್ಕ ತುಂಬಾನೇ ಅತ್ತುಬಿಟ್ಟಳು. ನನ್ನ ತಮ್ಮನಿಗೆ ತುಂಬಾ ಮೋಸ ಆಗಿದೆ ಅಂತ. ನನ್ನ ಮೊಮ್ಮಗ ಸಹ ಮಾವ ಕಪ್ ತರಲಿಲ್ಲ ಅಂತ ಬೇಜಾರು ಮಾಡಿಕೊಂಡಿದ್ದ’’ ಎಂದಿದ್ದಾರೆ ವನಜಾಕ್ಷಿ.
ರಜತ್ ಅಥವಾ ನನ್ನ ಮಗ ಗೆಲ್ಲಬೇಕಿತ್ತು ಅಂತ ನನಗೆ ಆಸೆ ಇತ್ತು. ನನ್ನ ಮಗ 100 ದಿನ ಇದ್ದ. ರಜತ್ 50 ದಿನ ಇದ್ದ. ಅದಕ್ಕೆ ನನ್ನ ಮಗ ಗೆಲ್ಲಬೇಕಿತ್ತು ಅಂತ ಅಂದುಕೊಂಡಿದ್ದೆ’’ ಅಂತ ತ್ರಿವಿಕ್ರಮ್ ತಾಯಿ ಹೇಳಿದ್ದಾರೆ
ನನಗೆ ಹನುಮಂತನಲ್ಲಿ ಏನೂ ಕಾಣಿಸಲಿಲ್ಲ. ಹನುಮಂತ ಬದಲು ಬೇರೆ ಯಾರೇ ಗೆದ್ದಿದ್ದರೂ ಖುಷಿ ಆಗುತ್ತಿತ್ತು’’ ಅಂತ ತ್ರಿವಿಕ್ರಮ್ ತಾಯಿ ವನಜಾಕ್ಷಿ ಹೇಳಿರುವ ಮಾತು ವೈರಲ್ ಆಗಿದೆ.