ಹನುಮ ಮಾಲಾಧಾರಿಗಳಿಂದ ಜಾಮಿಯಾ ಮಸೀದಿಗೆ ನುಗ್ಗಲು ಯತ್ನ: ತಳ್ಳಾಟ, ನೂಕಾಟ.!
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಮೆರವಣಿಗೆಯ ವೇಳೆ, ಹನುಮ ಮಾಲಾಧಾರಿಗಳು “ಈ ಜಾಗ ನಮ್ಮದು” ಎಂದು ಘೋಷಿಸಿ ಜಾಮಿಯಾ ಮಸೀದಿ ಒಳಗೆ ನುಗ್ಗಲು ಯತ್ನಿಸಿದರು. ಪೊಲೀಸರು ತಕ್ಷಣ ಕ್ರಮ ತೆಗೆದುಕೊಂಡು ಅವರನ್ನು ತಡೆದ ಪರಿಣಾಮ, ಯಾತ್ರಾರ್ಥಿಗಳು ಮತ್ತು ಪೊಲೀಸರ ನಡುವೆ ತೀವ್ರ ತಳ್ಳಾಟ-ನೂಕಾಟ ಉಂಟಾಯಿತು.
ಇದೇ ವೇಳೆ ಹನುಮ ಮಾಲಾಧಾರಿಗಳು, ಕೇಸರಿ ಧ್ವಜ ತಿರುಗಿಸಿ ಮಸೀದಿ ಜಾಗ ನಮ್ಮದು ಎಂದು ಘೋಷಣೆ ಮೊಳಗಿತು. ಅಲ್ಲದೇ ಜಾಮಿಯಾ ಮಸೀದಿಯಲ್ಲಿರುವವನು ಹನುಮಂತ ಎಂದು ಘೋಷಣೆ ಕೂಗಿ ಬೂದುಗುಂಬಳ ಇಳಿ ತೆಗೆದು ಒಡೆದರು.
ಇನ್ನು ಹನುಮ ಮಾಲಾಧಾರಿಗಳ ಜಾಮಿಯಾ ಮಸೀದಿ ಮುಂದೆ ಕುಳಿತು ಭಜನೆ ಮಾಡಿದ್ದು, ಈ ವೇಳೆ ಪರಿಸ್ಥಿತಿ ಕೈಮೀರುತ್ತಿರುತ್ತಿದ್ದಂತೆಯೇ ಎಚ್ಚೆತ್ತ SP ಮಲ್ಲಿಕಾರ್ಜುನ ಬಾಲದಂಡಿ ಅವರು ಪ್ರವೇಶಿಸಿ ಹನುಮ ಮಾಲಾಧಾರಿಗಳ ಮನವೊಲಿಸಿದರು. ಬಳಿಕ ಹನುಮ ಮಾಲಾಧಾರಿಗಳು ಜಾಮಿಯಾ ಮಸೀದಿ ವೃತ್ತದಿಂದ ಮುಂದೆ ಸಾಗಿದರು.






