ಹರ್ಭಜನ್ ಕಾಲುಮುಗಿದ ರೈನಾ!

Date:

ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಒಂದು ಕ್ರಿಕೆಟ್ ಟೂರ್ನಮೆಂಟ್ ಮಾತ್ರವಲ್ಲದೇ ಹಲವಾರು ಸ್ನೇಹ ಸಂಬಂಧಗಳು ಹುಟ್ಟಿಕೊಳ್ಳಲು ಕಾರಣವಾದ ವೇದಿಕೆ ಕೂಡ ಆಗಿದೆ. ಮೈದಾನದಲ್ಲಿ ಎರಡು ತಂಡಗಳ ನಡುವೆ ಮತ್ತು ಆಟಗಾರರ ನಡುವೆ ಪೈಪೋಟಿ ಇರುವುದು ಮಾತ್ರವಲ್ಲದೆ ಉತ್ತಮ ಸ್ನೇಹ ಬಾಂಧವ್ಯ ಕೂಡ ಇದೆ. ಕೇವಲ ತಮ್ಮ ತಂಡದ ಆಟಗಾರರ ಜೊತೆ ಮಾತ್ರವಲ್ಲದೆ ಬೇರೆ ತಂಡದ ಆಟಗಾರರ ಜೊತೆ ಕೂಡ ಆಟಗಾರರು ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದು ಪರಸ್ಪರ ಎದುರಾದಾಗ ನಡೆದುಕೊಳ್ಳುವ ರೀತಿ ಇತರರಿಗೆ ಮಾದರಿಯಾಗಿರುತ್ತವೆ.

ಹೀಗೆ ವಿಭಿನ್ನ ತಂಡದ ಕೆಲ ಆಟಗಾರರು ಪರಸ್ಪರ ಎದುರಾದಾಗ ನಡೆದುಕೊಳ್ಳುವ ರೀತಿ ಈ ಹಿಂದೆ ಕೆಲವೊಮ್ಮೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ವೈರಲ್ ಆಗಿದ್ದವು. ಈಗ ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹರ್ಭಜನ್ ಸಿಂಗ್ ಮೈದಾನದಲ್ಲಿ ಪರಸ್ಪರ ಭೇಟಿಯಾದಾಗ ನಡೆದುಕೊಂಡ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಧವಾರ ( ಏಪ್ರಿಲ್ 21 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಪಂದ್ಯವಿತ್ತು.

ಈ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ ಮತ್ತು ಪ್ರಸ್ತುತ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರರಾದ ಹರ್ಭಜನ್ ಸಿಂಗ್ ಪರಸ್ಪರ ಭೇಟಿಯಾಗಿದ್ದಾರೆ. ಮೈದಾನದಲ್ಲಿದ್ದ ಹರ್ಭಜನ್ ಸಿಂಗ್ ಅವರ ಬಳಿ ಬಂದ ಸುರೇಶ್ ರೈನಾ ಹರ್ಭಜನ್ ಅವರ ಕಾಲು ಮುಗಿಯಲು ಪ್ರಯತ್ನಪಡುತ್ತಾರೆ , ಆದರೆ ಇದಕ್ಕೆ ಒಪ್ಪದ ಹರ್ಭಜನ್ ಸಿಂಗ್ ಸುರೇಶ್ ರೈನಾ ಕೈಗೆ ಕಾಲು ತಾಕದ ಹಾಗೆ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ, ನಂತರ ಇಬ್ಬರೂ ಪರಸ್ಪರ ನಗುವಿನೊಂದಿಗೆ ಮಾತನಾಡಲಾರಂಭಿಸುತ್ತಾರೆ.

 

 

ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸುರೇಶ್ ರೈನಾ ಅವರ ಸರಳತೆ ಮತ್ತು ಹಿರಿಯ ಆಟಗಾರರಿಗೆ ಅವರು ನೀಡುವ ಗೌರವಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...