ಡೆಹ್ರಾಡೂನ್: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ನ್ಯಾಯಾಲಯದ ಆದೇಶದ ನಂತರ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳ ತಂಡ, ಮದರಸಾ ಮತ್ತು ಮಸೀದಿಯ ಕಟ್ಟಡಗಳನ್ನು ನೆಲಸಮಗೊಳಿಸಲು ಪ್ರಯತ್ನಿಸಿದಾಗ ಹಿಂಸಾಚಾರ ಆರಂಭವಾಯಿತು. ಈ ಕ್ರಮಕ್ಕೆ ಹಲ್ದ್ವಾನಿಯ ವನ್ಭುಲ್ಪುರ ಪ್ರದೇಶದಲ್ಲಿ ಜನಸಮೂಹದಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು.
ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದು, 250 ಮಂದಿ ಗಾಯಗೊಂಡಿದ್ದಾರೆ. ಗಲಭೆಕೋರರು ನಡೆಸಿದ ಕಲ್ಲು ತೂರಾಟದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದು, ಹಲವಾರು ಆಡಳಿತ ಅಧಿಕಾರಿಗಳು, ಪುರಸಭೆಯ ಕಾರ್ಯಕರ್ತರು ಮತ್ತು ಪತ್ರಕರ್ತರು ಗಾಯಗೊಂಡಿದ್ದಾರೆ. ಅಲ್ಲದೇ ಉದ್ರಿಕ್ತರ ಗುಂಪು, ಪೊಲೀಸ್ ಠಾಣೆಯ ಹೊರಗಿನ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಹಿಂಸಾಚಾರ ಉಲ್ಬಣಗೊಂಡಿದ್ದು, ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಸರ್ಕಾರಿ ಜಾಗದಲ್ಲಿ ಮದರಸಾ ಮತ್ತು ಮಸೀದಿ ನಿರ್ಮಿಸಲಾಗಿದೆ. ಕೋರ್ಟಿನ ಆದೇಶದ ಮೇರೆಗೆ ಕೆಡವಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಮೀನಾ ತಿಳಿಸಿದ್ದಾರೆ.
ಹಲ್ದ್ವಾನಿಯಲ್ಲಿ ಮದರಸಾ ನೆಲಸಮ: 4 ಮಂದಿ ಸಾವು, 250ಜನರಿಗೆ ಗಾಯ
Date: