ಹಲ್ಲೆಗೊಳಾಗದ ಆನಂದ್ ಸಿಂಗ್ ಫೋಟೊ ವೈರಲ್..! ಈಗ ಹೇಗಿದ್ದಾರೆ ನೋಡಿ..!!
ಕಾಂಗ್ರೆಸ್ ಶಾಸಕರು ತಂಗಿದ್ದ ರೆಸಾರ್ಟಿನಲ್ಲಿ ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ನಡೆದಿರುವ ಗಲಾಟೆಗೆ ಇಡೀ ಕಾಂಗ್ರೆಸ್ ಪಾಳಯವೇ ಬೆಚ್ಚಿಬಿದ್ದಿದೆ.. ರಾತ್ರಿ ಪಾರ್ಟಿ ಆರಂಭಗೊಂಡಾಗ ಎಲ್ಲರೊಂದಿಗೆ ಸರಿಯಾಗಿದ್ದ ಶಾಸಕರು ಆನಂತರ ಒಬ್ಬರ ಮೇಲೆ ಒಬ್ಬರು ಗಲಾಟೆ ಮಾಡಿಕೊಂಡಿದ್ದಾರೆ..
ಗಲಾಟೆಯಲ್ಲಿ ಶಾಸಕ ಆನಂದ್‍ಸಿಂಗ್ ಕಣ್ಣು, ಎದೆ, ತಲೆಗೆ ಪೆಟ್ಟು ಬಿದ್ದಿದ್ದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.. ಕಳೆದ ಒಂದು ದಿನದಿಂದ ಕಾಂಗ್ರೆಸ್ ನಾಯಕರು ಅಪೋಲೋ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಆನಂದ್ ಸಿಂಗ್ ಆರೋಗ್ಯವನ್ನ ವಿಚಾರಿಸುತ್ತಿದ್ದಾರೆ.. ಇತ್ತಕಡೆ ಆನಂದ್ ಸಿಂಗ್ ಬೆಂಬಲಿಗರು ಸಹ ಆಸ್ಪತ್ರೆಗೆ ದೌಡಾಯಿಸಿದ್ದು, ತಮ್ಮ ನಾಯಕನನ್ನ ಭೇಟಿ ಮಾಡ್ತಿದ್ದಾರೆ…
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ಆನಂದ್ ಸಿಂಗ್ ಅವರ ಎದೆ ತಲೆ ಹಾಗೆ ಕಣ್ಣಿನ ಭಾಗಕ್ಕೆ ಪೆಟ್ಟಾಗಿದ್ದು, ಸದ್ಯ ಕಣ್ಣಿನ ಸುತ್ತ ರಕ್ತ ಹೆಪ್ಪುಗಟ್ಟಿ ಗಾಯವಾಗಿರೋದು ಎದ್ದು ಕಾಣ್ತಿದೆ.. ಇನ್ನು ಆನಂದ್ ಸಿಂಗ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಅಂತ ತಿಳಿಸಿದ್ದಾರೆ.. ಸದ್ಯ ಶಾಸಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ..







