ಕಳೆದ ಎರಡು ದಿನಗಳಿಂದ ನೀವು ಹಳೆಯ 10 ಮತ್ತು 5 ರೂ ನಾಣ್ಯವನ್ನು ವಿನಿಮಯ ಮಾಡಿಕೊಂಡರೆ ಸಾಕಷ್ಟು ಹಣವನ್ನು ಗಳಿಸಬಹುದು ಎಂದು ಹೇಳುವ ಹಲವಾರು ಪೋಸ್ಟ್‌ಗಳು ವೈರಲ್ ಆಗಿವೆ. ಜನರು ತಮ್ಮ ಹಳೆಯ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ನೀವು ಮಾತೆ ವೈಷ್ಣೋ ದೇವಿ ಚಿತ್ರವಿರುವ 5 ಮತ್ತು 10 ರೂ.ಗಳ ನಾಣ್ಯಗಳನ್ನು ಹೊಂದಿದ್ದರೆ ಅವುಗಳನ್ನು ಹರಾಜಿಗೆ ಹಾಕುವ ಮೂಲಕ ಲಕ್ಷ ರೂಪಾಯಿಗಳನ್ನು ಗಳಿಸಬಹುದು ಎಂದು ಹೇಳಲಾಗಿದೆ. ಈ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಲಕ್ಷಾಂತರ ರೂಪಾಯಿಗಳಲ್ಲಿ ಮಾರಿ ಹೋಗುತ್ತಿದೆ ಎಂದು ಹೇಳಲಾಗಿದೆ.
ಹಳೆಯ 5 ರೂ ನೋಟಿನ ವಿನಿಮಯದಿಂದ ನೀವು 30,000 ರೂ.ಗಳವರೆಗೆ ಗಳಿಸಬಹುದು ಎಂದು ಹೆಚ್ಚಿನ ವರದಿಗಳು ತಿಳಿಸಿವೆ. ಆದಾಗ್ಯೂ ಕೆಲವೊಂದು ಷರತ್ತು ಅನ್ವಯವಾಗಲಿದೆ. ನಿಮ್ಮ ನೋಟಿನಲ್ಲಿ ಟ್ರಾಕ್ಟರ್‌ನ ಚಿತ್ರವಿದ್ದರೆ ಮಾತ್ರ ನೀವು ಹಣವನ್ನು ಸಂಪಾದಿಸಬಹುದಾಗಿದೆ. ಇದಲ್ಲದೆ, ನೋಟಿನಲ್ಲಿ 786 ಇದ್ದರೆ, ನೀವು ಯೋಗ್ಯವಾದ ಹಣವನ್ನು ಗಳಿಸಬಹುದು.
ಇತ್ತೀಚೆಗೆ, ವೆಬ್‌ಸೈಟ್‌ವೊಂದು ಜಾಹೀರಾತನ್ನು ಪೋಸ್ಟ್ ಮಾಡಿದ್ದು, ನೀವು ರು. 1 ನೋಟ್ ಹೊಂದಿದ್ದರೆ, ಷರತ್ತಿಗೆ ತಕ್ಕುದಾಗಿದ್ದರೆ, ನೀವು 45,000 ರು. ಗಳಿಸಬಹುದಾಗಿದೆ. ಭಾರತ ಸರ್ಕಾರವು 26 ವರ್ಷಗಳ ಹಿಂದೆ ರು. 1 ನೋಟ್‌ನ ಬಳಕೆ ಸ್ಥಗಿತಗೊಳಿಸಿದೆ. ಆದರೆ 2015 ರಲ್ಲಿ, ನೋಟ್ ಮತ್ತೆ ಚಲಾವಣೆಯಲ್ಲಿದೆ. ಹಳೆಯ ನೋಟುಗಳು ಪುರಾತನ ಮೌಲ್ಯವನ್ನು ಹೊಂದಿವೆ. ಆದ್ದರಿಂದ ಈ ನೋಟನ್ನು ಭಾರೀ ಬೆಲೆಗೆ ಖರೀದಿ ಮಾಡಲಾಗುತ್ತಿದೆ.
ನೀವು ಮೊದಲು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಬಳಿಕ ನೋಟು ಅಥವಾ ನಾಣ್ಯದ ಚಿತ್ರವನ್ನು ಆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕಾಗಿದೆ.
ಬಳಿಕ ಇದರ ಮಾರಾಟದ ಜಾಹೀರಾತನ್ನು ಪ್ಲಾಟ್‌ಫಾರ್ಮ್‌ನಲ್ಲಿ ತೋರಿಸಲಾಗುತ್ತದೆ. ನಂತರ ಆಸಕ್ತರು ಜಾಹೀರಾತನ್ನು ನೋಡಿ ನಿಮ್ಮನ್ನು ಸಂಪರ್ಕಿಸಿದರೆ, ನೀವು ನಿಮ್ಮ ನೋಟನ್ನು ಮಾರಾಟ ಮಾಡಬಹುದಾಗಿದೆ. ಆದರೆ ರು. 1 ನೋಟ್ ಆದರೆ 1957 ರಲ್ಲಿ ಅಂದಿನ ರಾಜ್ಯಪಾಲ ಎಚ್ ಎಂ ಪಟೇಲ್‌ನ ಸಹಿ ಆ ನೋಟಿನಲ್ಲಿ ಇರಬೇಕು. ಹಾಗೆಯೇ ಸರಣಿ ಸಂಖ್ಯೆ 123456 ಆಗಿರಬೇಕು ಎಂಬ ಷರತ್ತು ಇದೆ.