ಹಳ್ಳಿ ಹುಡ್ಗಿ ಯುವ ಉದ್ಯಮಿಯಾದ ಸೂಪರ್ ಸ್ಟೋರಿ …!
ಸ್ನೇಹಾ ರಾಕೇಶ್. ಕರ್ನಾಟಕದ ಯುವ ಉದ್ಯಮಿ. ಕಳೆದ ವರ್ಷ ‘ ಇಯು ಇಂಡಿಯಾ-40 ’ ಜನರ ಪಟ್ಟಿಯಲ್ಲಿ 16 ಮಹಿಳೆಯರು ಹಾಗೂ 24 ಪುರುಷ ನವೋದ್ಯಮಿಗಳಲ್ಲಿ ಸ್ನೇಹಾ ರಾಕೇಶ್ ಅವರು ಭಾರತವನ್ನು ಪ್ರತಿನಿಧಿಸಿ, ದೇಶದ ಮೊದಲ ಕನ್ನಡದ ಯುವ ಉದ್ಯಮಿಯೆಂದು ಹೆಸರಾಗಿದ್ದಾರೆ. ಇವರ ಸಾಧನೆ ಇಡೀ ದೇಶದ ತುಂಬೆಲ್ಲಾ ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ ತಿಂಗಳು ಬ್ರಸೆಲ್ಸ್ನಲ್ಲಿ ಯುರೋಪ್ ಇಂಡಿಯಾ ಸೆಂಟರ್ ಫಾರ್ ಬಿಸಿನೆಸ್ ಮತ್ತು ಇಂಡಸ್ಟ್ರಿ ಬ್ರುಸೆಲ್ಸ್ನ ಯುರೋಪಿಯನ್ ಸಂಸತ್ ನಡೆಯಿತು. ಇಲ್ಲಿ ಇಂಡಿಯಾ-40 ಯುವ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಸಮ್ಮೇಳನಕ್ಕೆ ಭಾರತದ ಯುವ ಉದ್ಯಮಿಗಳು, ನಾಯಕರು, ಕಾರ್ಯನಿರ್ವಾಹಕರಿಗೆ ಆಹ್ವಾನ ನೀಡಲಾಗಿದ್ದು, ಇದರಲ್ಲಿ ಸ್ನೇಹಾ ರಾಕೇಶ್ ಒಬ್ಬರು.
ಬ್ರಸೆಲ್ಸ್ ಸಂಸತ್ತಿನಲ್ಲಿ ಮುಂದಿನ ದಶಕಗಳಲ್ಲಿ ಐರೋಪ್ ಒಕ್ಕೂಟ-ಭಾರತ ವ್ಯಾಪಾರ ಸಂಬಂಧಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ 40ರೊಳಗಿನ ಎಲ್ಲಾ ವ್ಯಾಪಾರ ಉದ್ಯಮಿಗಳು ಭಾಗವಹಿಸಿದ್ದರು. ಇದು ಯುರೋಪಿಯನ್ ಇಂಡಿಯಾ ಬಿಸಿನೆಸ್ ಲೀಡರ್, ಇಐಸಿಬಿಐ ಅಧ್ಯಕ್ಷ, ಯುರೋಪಿಯನ್ ಪಾರ್ಲಿಮೆಂಟ್ ನ ಸದಸ್ಯ ಹಾಂ ಕ್ಯಾರೋಲಿನ್ ವಿರ್ಶವದ ಯುವ ಉದ್ಯಮಿಗಳ ಪಟ್ಟಿ ಬಿಡುಗಡೆ ಮಾಡಿದರು. ಇದರಲ್ಲಿ ಸ್ನೇಹಾ ರಾಕೇಶ್ ಸಹ ಯುವ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ಅಷ್ಟೇ ಅಲ್ಲದೆ, ಡಾ. ಸ್ನೇಹಾ ರಾಕೇಶ್ ವೃತ್ತಿ ಶ್ರೇಷ್ಠತೆಗೆ ಕೊಡ ಮಾಡುವ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸ್ನೇಹಾ ಅವರು ಅನೇಕ ಸವಾಲುಗಳನ್ನು ಎದುರಿಸಿಯೇ ತಂತ್ರಜ್ಞಾನ ಕ್ಷೇತ್ರದಲ್ಲಿ 2018ರ ಸಾಲಿನ ದೇಶದ ಪ್ರಬಲ ಮಹಿಳೆಯರಲ್ಲಿ 6ನೇ ಸ್ಥಾನ ಪಡೆದುಕೊಂಡು 22ನೇ ವಯಸ್ಸಿನಲ್ಲೇ ಅಕರ್ ವಾಕ್ಸ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎನ್ನುವ ಐಟಿ ಕಂಪನಿಯನ್ನು ಸ್ಥಾಪಿಸಿದ ಇವರು ಅಪ್ಪಟ ಕನ್ನಡತಿ ಎನ್ನುವುದು ಹೆಮ್ಮೆ.
ಇನ್ನು, ಸ್ವಂತ ಉದ್ಯಮ ಆರಂಭಿಸಬೇಕೆಂಬ ಕನಸು ಕಂಡು ಬಾಲ್ಯದಲ್ಲಿ ವಿವಿಧ ಕಷ್ಟಗಳನ್ನು ಅನುಭವಿಸಿರುವ ಸ್ನೇಹಾ ಅವರ ಮನೋಸ್ಥೆರ್ಯ ಮಾತ್ರ ಎಂದೂ ಕುಗಿಲ್ಲ. ತಾತನ ಮಾರ್ಗದರ್ಶನದಲ್ಲೇ ಬೆಳೆದವರು. ಹುಟ್ಟೂರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹುಲ್ಲೇನಹಳ್ಳಿ. ಸರ್ಕಾರಿ ಶಾಲೆಯಲ್ಲೇ ಪ್ರಾಥಮಿಕ ಶಿಕ್ಷಣ. ಸರ್ಕಾರಿ ಹಾಸ್ಟಲ್ ನಲ್ಲಿ ಇದ್ದುಕೊಂಡು ಡಿಪ್ಲೋಮಾ ಓದಿದರು. ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿಕೊಂಡು ಎಲ್ಲೂ ಧೀರ್ಘಕಾಲದ ಕೆಲಸ ಮಾಡಲು ಸಾಧ್ಯವಾಗಲಿಲ್ಲ.
ಸ್ನೇಹಾ ಅವರು ಹಳ್ಳಿಯಿಂದ ಬಂದಿದ್ದರಿಂದ ಸಂವಹನ ಕೌಶಲ್ಯವೂ ಅಷ್ಟೇನೂ ಉತ್ತಮವಾಗಿರಲಿಲ್ಲ. ಹಾಗೆಂದು ಸುಮ್ಮನೇ ಕೂರದೆ ಉದ್ಯೋಗದ ಜೊತೆ ಜೊತೆಗೆ ಎಜುಕೇಕ್ಷನ್ ಲೋನ್ ಪಡೆದು ಶ್ರಮವಹಿಸಿ ಎಂಜನಿಯರಿಂಗ್ ಪದವಿ ಹಾಗೂ ಎಂ.ಎಸ್. ರಾಮಯ್ಯ ಕಾಲೇಜ್ ನಲ್ಲಿ ಎಂಎಸ್ಸಿ ಪೂರ್ಣಗೊಳಿಸಿದರು. ಈ ಮಧ್ಯೆಯೇ ಎದುರಾದ ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳಲು ಆನ್ ಲೈನ್ ನಲ್ಲಿ ಪ್ರೀಲಾನ್ಸರ್ ಆಗಿ ಪ್ರಾಜೆಕ್ಟ್ ಶುರು ಮಾಡಿದರು.
ಈಗ ಸ್ನೇಹಾ ರಾಕೇಶ್ ಅವರೇ ನೂರಾರು ಜನರಿಗೆ ಕೆಲಸ ನೀಡುತ್ತಿದ್ದಾರೆ. 2017ರಲ್ಲಿ ಸಮಗ್ರ ಅಭಿವೃದ್ಧಿ ಟ್ರಸ್ಟ್ ಆರಂಭಿಸಿ, ಈ ಮೂಲಕ ಸುಮಾರು 2 ಸಾವಿರಕ್ಕೂ ಹೆಚ್ಚು ಯುವಕ-ಯುವತಿಯರಿಗೆ ತರಬೇತಿ ನೀಡಿದ್ದಾರೆ. ನಿರುದ್ಯೋಗಿಗಳಿಗೆ, ಆರ್ಥಿಕವಾಗಿ ಹಿಂದುಳಿದ ಐಟಿ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಲು ಬೇಕಾದ ಕೌಶಲ್ಯವನ್ನು ತರಬೇತಿ ಮೂಲಕ ಹೇಳಿಕೊಡುತ್ತಿದ್ದಾರೆ. ಇದರಿಂದ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ಆಸರೆಯಾಗಿದೆ. ಆರ್ಥಿಕವಾಗಿ ಹಿಂದುಳಿದವರೆ ಈ ಮೂಲಕ ಸ್ನೇಹಾ ಅವರು ನೆರವಾಗುತ್ತಿದ್ದಾರೆ.
ಅದೇನೆ ಇರಲಿ, ಸ್ನೇಹಾ ರಾಕೇಶ್ ಅವರ ಸಾಧನೆಗೆ ಹಲವಾರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಇವರ ಕಾರ್ಯ ನಿಷ್ಠೆ, ವೃತಿಪರತೆ ಮತ್ತು ಕೌಶಲ್ಯ ಪ್ರತಿಯೊಬ್ಬರಿಗೂ ಸ್ಫೂರ್ತಿ.