ಹಳ್ಳಿ ಹೈದನಿಗೆ ಒಲಿದ ಬಿಗ್ಬಾಸ್ ವಿನ್ನರ್ ಪಟ್ಟ..! ಹನುಮಂತನಿಗೆ ಸಿಕ್ಕ ಹಣವೆಷ್ಟು ಗೊತ್ತಾ..?
ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಯಾರು ಎಂಬುದು ರಿವೀಲ್ ಆಗಿದೆ. ಕಳೆದ 117 ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಬಿಗ್ ಬಾಸ್ ಈ ಬಾರಿ ಮೋಕ್ಷಿತಾ ಪೈ, ರಜತ್, ಮಂಜು, ತ್ರಿವಿಕ್ರಂ ಹಾಗೂ ಹನುಮಂತ ಇದ್ದರು. ಹನುಮಂತ ಅವರಿಗೆ ಕಪ್ ಒಲಿದಿದೆ. ಸರಳತೆ ಮೂಲಕವೇ ಸೌಂಡು ಮಾಡಿದ್ದ ಹನುಮಂತ ಅವರು ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದರು. ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿದ್ದಾರೆ.
ಇನ್ನೂ, ಬಿಗ್ಬಾಸ್ ಕನ್ನಡ ಸೀಸನ್ 11ಕ್ಕೆ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗಮನ ಸೆಳೆದರು. ಅವರ ಆಟ ಎಲ್ಲರಿಗೂ ಇಷ್ಟ ಆಯಿತು. ಚಾಣಾಕ್ಷತನದಿಂದ ಅವರು ಆಟ ಆಡಿ ಭೇಷ್ ಎನಿಸಿಕೊಂಡರು. ಫಿನಾಲೆ ಟಿಕೆಟ್ ಪಡೆದ ಮೊದಲ ಸ್ಪರ್ಧಿ ಇವರಾಗಿದ್ದರು. ಈಗ ಕಪ್ ಕೂಡ ಗೆದ್ದುಕೊಂಡಿದ್ದಾರೆ. ಪ್ರತಿ ಸೀಸನ್ನಲ್ಲಿ ವಿನ್ನರ್ಗೆ ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದಾರೆ.