ಹಾರ್ದಿಕ್, ಕೃನಾಲ್ ಪಾಂಡ್ಯ ತಂದೆ ನಿಧನ

Date:

ಟೀಮ್ ಇಂಡಿಯಾದ ಆಲ್‌ ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ಅವರು ನಿಧನರಾಗಿದ್ದಾರೆ. ಸದ್ಯ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡುತ್ತಿದ್ದ ಕೃನಾಲ್ ಬಯೋಬಬಲ್ ಅನ್ನು ತೊರೆದಿದ್ದಾರೆ.

ತಂದೆ ಕೊನೆಯುಸಿರೆಳೆದಿರುವುದರಿಂದಾಗಿ ಬರೋಡಾ ತಂಡದ ನಾಯಕರಾಗಿರುವ ಹಾರ್ದಿಕ್ ಹಿರಿಯ ಸಹೋದರ ಕೃನಾಲ್ ಪಾಂಡ್ಯ ಬಯೋಬಬಲ್ ತೊರೆದು ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ. ಸಯ್ಯದ್ ಮುಷ್ತಾಕ್ ಟ್ರೋಫಿ ಇನ್ನುಳಿದ ಪಂದ್ಯಗಳಲ್ಲಿ ಕೃನಾಲ್ ಆಡುತ್ತಿಲ್ಲ.

ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರ ತಂದೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂತಾಪ ವ್ಯಕ್ತಪಡಿಸಿದ್ದಾರೆ. ಸುದ್ದಿ ಕೇಳಿ ನನ್ನ ಹೃದಯ ಒಡೆದಂತಾಯಿತು ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಹಾರ್ದಿಕ್ ಮತ್ತು ಕೃನಾಲ್ ಅವರ ತಂದೆ ಸಾವಿಗೀಡಾಗಿದ್ದು ಕೇಳಿ ನನ್ನ ಹೃದಯ ಒಡೆದಂತಾಯಿತು. ಒಂದೆರಡು ಬಾರಿ ಅವರ ಜೊತೆ ಮಾತನಾಡಿದ್ದೆ. ನೋಡುವಾಗ ಅವರೊಬ್ಬ ತಮಾಷೆಯಾಗಿರುವ, ಬದುಕನ್ನು ಸಂಭ್ರಮಿಸುತ್ತಿರುವ ವ್ಯಕ್ತಿಯಂತೆ ಕಂಡರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹಾರ್ದಿಕ್-ಕೃನಾಲ್ ಇಬ್ಬರೂ ಧೈರ್ಯ ತಗೊಳ್ಳಿ,’ ಎಂದು ಕೊಹ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬರೋಡಾ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಎಲೈಟ್ ಗ್ರೂಪ್‌ ‘ಸಿ’ಯಲ್ಲಿದೆ. ಹಾರ್ದಿಕ್ ಪಾಂಡ್ಯ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೊಫಿಯಲ್ಲಿ ಆಡುತ್ತಿಲ್ಲ. ಆದರೆ ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ನಿಯಮಿತ ಓವರ್‌ಗಳ ಕ್ರಿಕೆಟ್‌ಗಾಗಿ ಹಾರ್ದಿಕ್ ಶೀಘ್ರ ಅಭ್ಯಾಸ ಆರಂಭಿಸಲಿದ್ದಾರೆ.

ಬರೋಡಾ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಎಲೈಟ್ ಗ್ರೂಪ್‌ ‘ಸಿ’ಯಲ್ಲಿದೆ. ಹಾರ್ದಿಕ್ ಪಾಂಡ್ಯ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೊಫಿಯಲ್ಲಿ ಆಡುತ್ತಿಲ್ಲ. ಆದರೆ ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ನಿಯಮಿತ ಓವರ್‌ಗಳ ಕ್ರಿಕೆಟ್‌ಗಾಗಿ ಹಾರ್ದಿಕ್ ಶೀಘ್ರ ಅಭ್ಯಾಸ ಆರಂಭಿಸಲಿದ್ದಾರೆ.

 

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...