ಹಾರ್ದಿಕ್ & ರಾಹುಲ್ ಗೆ ರಿಲೀಫ್..!! ಬಿಸಿಸಿಐ ಕೈಗೊಂಡ ನಿರ್ಧಾರವೇನು ಗೊತ್ತಾ..?
ಭಾರತ ಕ್ರಿಕೆಟ್ ತಂಡದ ಇಬ್ಬರು ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗು ಕೆ.ಎಲ್.ರಾಹುಲ್ ತಮ್ಮ ಆಟದ ಮೂಲಕ ಟೀಮ್ ನಲ್ಲಿ ಖಾಯಂ ಸದಸ್ಯತ್ವ ಪಡೆದುಕೊಂಡು ಬೆಳವಣಿಗೆ ಹಂತದಲ್ಲಿದ್ರು.. ಇದೇ ಇವರ ನೆತ್ತಿಗೇರಿತ್ತೋ ಏನೋ ಗೊತ್ತಿಲ್ಲ.. ಅಂದು ಕಾಫಿ ವಿತ್ ಕರಣ್ ಷೋನಲ್ಲಿ ಕೂತ ಕರಣ್ ಜೋಹರ್ ಮುಂದೆ ಮಹಿಳೆಯರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು..
ಹೀಗಾಗೆ ಈ ಇಬ್ಬರಿಗೆ ಸ್ಪಷ್ಟನೆ ಕೇಳಿದ್ದ ಬಿಸಿಸಿಐ ಆನಂತರ ಭಾರತ ತಂಡದಿಂದ ಕೈಬಿಟ್ಟು ಅಮಾನತ್ತು ಶಿಕ್ಷೆ ವಿಧಿಸಿತ್ತು.. ಸದ್ಯ ಬಿಸಿಸಿಐ ನಿರ್ವಾಹಕ ಸಮಿತಿ ಇಬ್ಬರು ಆಟಗಾರರ ಮೇಲಿದ್ದ ಮಧ್ಯಂತರ ಅಮಾನತ್ತು ಆದೇಶವನ್ನ ತಕ್ಷಣಕ್ಕೆ ಹಿಂಪಡೆದಿದೆ.. ಬಿಸಿಸಿಐ ತನಿಖಾಧಿಕಾರಿಯ ನೇಮಕವನ್ನ ಸುಪ್ರೀಂ ಕೋರ್ಟ್ ಫೆಬ್ರವರಿ 5 ಕ್ಕೆ ಮುಂದೂಡಿರುವ ಹಿನ್ನೆಲೆಯಲ್ಲಿ ಮುಂದಿನ ಕ್ರಮವನ್ನ ಕೈಗೊಳ್ಳದಂತೆ ತಿಳಿಸಿದೆ..
ಸದ್ಯ ಖಾಸಗಿ ಕಾರ್ಯಕ್ರಮದಲ್ಲಿ ಕೂತು ಮಹಿಳೆಯ ಬಗ್ಗೆ ಮನಸೋ ಇಚ್ಛೆ ಮಾತನಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದು, ಹಾರ್ದಿಕ್ ಸ್ಥಾನವನ್ನ ರವೀಂದ್ರ ಜಡೇಜಾ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಇಬ್ಬರ ಕ್ರಿಕೆಟ್ ಕೆರಿಯರ್ ಏನಾಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ..