ಬೆಂಗಳೂರು: ಹಾಲಿನ ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ, ಈ ಹಿಂದೆ ಮೂರು ರೂ. ಈಗ ಎರಡು ರೂ.ಹೆಚ್ಚಳ ಮಾಡಿದ್ದು ಐದು ರೂ.ಗಳಲ್ಲಿ ರೈತರಿಗೆ ಪಾಲು ಸಿಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ, ಈ ಹಿಂದೆ ಮೂರು ರೂ. ಈಗ ಎರಡು ರೂ.ಹೆಚ್ಚಳ ಮಾಡಿದ್ದು ಐದು ರೂ.ಗಳಲ್ಲಿ ರೈತರಿಗೆ ಪಾಲು ಸಿಗಲಿದೆ.
ಇದಕ್ಕೆ ವಿರೋಧ ಮಾಡುವ ಮೂಲಕ ಬಿಜೆಪಿಯವರ ರೈತ ವಿರೋಧಿ ಧೋರಣೆ ಅನಾವರಣಗೊಂಡಿದೆ. ಬಿಜೆಪಿ ಆಳ್ವಿಕೆಯ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ನಮ್ಮ ಬಳಿ ಎಷ್ಟಿದೆ ಎನ್ನುವುದನ್ನು ನೋಡಲಿ ಮೊದಲು ಹಾಗೆ ರೈತರನ್ನ ಉಳಿಸುವ ಚಿಂತನೆ ಮಾಡಲಿ ಎಂದು ಹೇಳಿದರು.
ಇನ್ನೂ ಎಲ್ಲರ ಒತ್ತಾಯದ ಮೇರೆಗೆ ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕ ಸ್ಥಾನ ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನ ಉಳಿಸಲು ರಾಹುಲ್ ಗಾಂಧಿ ಈ ಜವಾಬ್ದಾರಿಗೆ ಸಮ್ಮತಿಸಿದ್ದಾರೆ. ದೇಶಕ್ಕೆ ದೊಡ್ಡ ಅಡಿಪಾಯವನ್ನು ಹಾಕುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಹಾಲಿನ ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ: ಡಿ.ಕೆ ಶಿವಕುಮಾರ್
Date: