ಹಾಲಿನ ಬದಲು ಹುತ್ತಕ್ಕೆ ಕೋಳಿ ರಕ್ತದ ಅಭಿಷೇಕ!

0
135

ಚಾಮರಾಜನಗರ : ಸಾಮಾನ್ಯವಾಗಿ ಹುತ್ತಕ್ಕೆ ಹಾಲೆರೆದು ಪೂಜಿಸುವುದು ನಿಮಗೆ ಗೊತ್ತಿದೆ. ಆದರೆ ಎಲ್ಲಾದರೂ ಕೋಳಿ ರಕ್ತದ ಅಭಿಷೇಕ ಮಾಡುತ್ತಾರಾ? ಆದರೆ ಇಲ್ಲೊಂದು ಕಡೆ ಹಾಗೆ ಹುತ್ತಕ್ಕೆ ಹಾಲಲ್ಲ ಕೋಳಿ ರಕ್ತ ಎರೆಯುತ್ತಾರೆ.
ಹೌದು, ಷಷ್ಠಿ ಹಬ್ಬದ ದಿನದಂದು ಹುತ್ತಕ್ಕೆ ಹಾಲೆರೆಯುವ ಮೂಲಕ ನಾಗಾರಾಧನೆ ಮಾಡುವುದು ಎಲ್ಲೆಡೆ ಸರ್ವೇ ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯ ನಾನಾ ಕಡೆಗಳಲ್ಲಿ ಹುತ್ತಕ್ಕೆ ಕೋಳಿ ರಕ್ತ ಎರೆದು ಕೋಳಿ ಮೊಟ್ಟೆ ಹಾಕಿ ನಾಗಾಪೂಜೆ ಮಾಡುತ್ತಾರೆ.
ಹೀಗೆ ಪೂಜೆ ಮಾಡಿದರೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾವುಗಳು ತಮಗೆ ಕಾಣಿಸುವುದಿಲ್ಲ. ಅವುಗಳಿಂದ ತಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂಬುದು ಗ್ರಾಮೀಣ ಜನರ ನಂಬಿಕೆ.
ಮೇಲ್ನೋಟಕ್ಕೆ ಇದು ಮೌಡ್ಯ ಎಂದೆನಿಸಿದರೂ ಹುತ್ತದ ಒಳಗಿರುವ ಹಾವುಗಳಿಗೆ ಹಾಲೆರೆದರೆ ಅವುಗಳಿಗೆ ತೊಂದರೆ ಉಂಟಾಗಬಹುದು, ಹುತ್ತಕ್ಕೆ ಹಾಲಿನ ಬದಲಾಗಿ ಕೋಳಿ ಮೊಟ್ಟೆ ಹಾಗೂ ಕೋಳಿಯ ತಲೆ ಭಾಗವನ್ನು ಹಾಕಿದರೆ ಹಾವುಗಳಿಗೆ ಆಹಾರವಾದರು ಆಗಲಿ ಎಂಬ ದೃಷ್ಟಿಯಿಂದ ಹಿರಿಯರು ಈ ಸಂಪ್ರದಾಯ ಹುಟ್ಟು ಹಾಕಿರಬಹುದು ಎಂಬುದು ನಾಸ್ತಿಕರ ವಾದವಾಗಿದೆ.

LEAVE A REPLY

Please enter your comment!
Please enter your name here