ಹಾವಿನ ಕಾಟಕ್ಕೆ ಮನೆಗೇ ಬೆಂಕಿ ಇಟ್ಟ ಭೂಪ!

Date:

ಸ್ವಂತ ಮನೆ ಕಟ್ಟಲೆಂದು ಜೀವನಪೂರ್ತಿ ಕಷ್ಟಪಟ್ಟು ದುಡಿದು ಹಣ ಉಳಿತಾಯ ಮಾಡುವವರನ್ನು ನೀವು ನೋಡಿರುತ್ತೀರಿ. ಆದರೆ, ಅದೇ ಮನೆಯಿಂದ ಜೀವಕ್ಕೇ ಕುತ್ತಾಗುತ್ತದೆ ಎಂದಾಗ ಜೀವ ಉಳಿಸಿಕೊಳ್ಳುವುದೇ ಮುಖ್ಯವಾಗುತ್ತದೆ. ಅಮೆರಿಕದ ಮೇರಿಲ್ಯಾಂಡ್‌ನ‌ಲ್ಲಿ ಇಂಥದ್ದೇ ಘಟನೆ ನಡೆದಿದೆ.

ದಿನಂಪ್ರತಿ ಮನೆಗೆ ನುಗ್ಗುತ್ತಿದ್ದ ಸರ್ಪಗಳಿಂದ ಮುಕ್ತಿ ಪಡೆಯಲೆಂದು ಮನೆ ಮಾಲೀಕ ಬರೋಬ್ಬರಿ 13.50 ಕೋಟಿ ರೂ. ಪಾವತಿಸಿ ಇತ್ತೀಚೆಗಷ್ಟೇ ಖರೀದಿಸಿದ್ದ ಮನೆಯನ್ನೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ!

ಹಾಗಂತ ಇದನ್ನು ಆತ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಈ ವ್ಯಕ್ತಿ ಆ ಮನೆಯನ್ನು ಖರೀದಿಸುವ ಮುನ್ನ ಆ ಮನೆಯಲ್ಲಿ ಬಾಡಿಗೆಗಿದ್ದವರು ಕೂಡ ಹಾವುಗಳ ಕಾಟದಿಂದ ರೋಸಿ ಹೋಗಿದ್ದರಂತೆ.

ಏನೂ ಆಗಲಿಕ್ಕಿಲ್ಲ ಎಂದು ಭಾವಿಸಿ ಇವರು ಮನೆಯನ್ನು ಕೊಂಡುಕೊಂಡಿದ್ದರು. ಆದರೆ, ಮನೆಗೆ ಬಂದಿದ್ದೇ ತಡ, ಹಾವುಗಳು ದಿನನಿತ್ಯ “ಅತಿಥಿ’ಗಳಂತೆ ಮನೆಗೆ ಆಗಮಿಸುತ್ತಿದ್ದವು. ಕಣ್ಣು ಹಾಯಿಸಿದಲ್ಲೆಲ್ಲ ಹಾವುಗಳನ್ನು ಕಂಡರೆ ಯಾರಿಗಾದರೂ ಹೇಗಾಗಿರಬೇಡ? ಇದರಿಂದ ಕಂಗಾಲಾದ ಮಾಲೀಕ, ಭಾನುವಾರ ಒಂದಿಷ್ಟು ಕಲ್ಲಿದ್ದಲನ್ನು ತಂದು ಅದಕ್ಕೆ ಬೆಂಕಿ ಕೊಟ್ಟಿದ್ದಾನೆ. ಕಲ್ಲಿದಲ್ಲಿನಿಂದ ಏಳುವ ಹೊಗೆ ತಾಳಲಾರದೇ ಸರ್ಪಗಳು ಓಡಿಹೋಗಬಹುದು ಎನ್ನುವುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಬೆಂಕಿಯು ಕ್ಷಣಮಾತ್ರದಲ್ಲಿ ಅಲ್ಲಿದ್ದ ದಹ್ಯ ವಸ್ತುಗಳಿಗೆ ವ್ಯಾಪಿಸಿ, 10 ಸಾವಿರ ಚದರ ಅಡಿ ವಿಸ್ತೀರ್ಣದ ಇಡೀ ಬಂಗಲೆಯನ್ನೇ ಸುಟ್ಟು ಕರಕಲಾಗಿದೆ.

ಮನೆಯು ಹೊತ್ತಿ ಉರಿಯುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಟ್ವೀಟಿಗರು ಈ ಘಟನೆ ಬಗ್ಗೆ ತಮಗೆ ತೋಚಿದಂತೆ ಅಭಿಪ್ರಾಯಗಳನ್ನೂ ಹರಿಬಿಟ್ಟಿದ್ದಾರೆ

 

Share post:

Subscribe

spot_imgspot_img

Popular

More like this
Related

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ಹಲವರಿಗೆ ಹೈಕೋರ್ಟ್ ತುರ್ತು ನೋಟಿಸ್

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ಹಲವರಿಗೆ ಹೈಕೋರ್ಟ್...

ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ: ಸರ್ಕಾರದಿಂದ 60 ದಿನಗಳ ವಿನಾಯಿತಿ

ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ: ಸರ್ಕಾರದಿಂದ 60 ದಿನಗಳ ವಿನಾಯಿತಿ ಬೆಂಗಳೂರು:...

ಆಂಧ್ರಪ್ರದೇಶದಲ್ಲಿ ಬಸ್-ಟಿಪ್ಪರ್ ಡಿಕ್ಕಿ: 12 ಮಂದಿ ಸಜೀವ ದಹನ, 20 ಜನರಿಗೆ ಗಾಯ

ಆಂಧ್ರಪ್ರದೇಶದಲ್ಲಿ ಬಸ್-ಟಿಪ್ಪರ್ ಡಿಕ್ಕಿ: 12 ಮಂದಿ ಸಜೀವ ದಹನ, 20 ಜನರಿಗೆ...

ಶೌಚಾಲಯದಲ್ಲಿ ಫೋನ್ ಬಳಸುತ್ತೀರಾ? ನಿಮಗೆ ಗೊತ್ತಿಲ್ಲದ ಈ ಸಮಸ್ಯೆಗಳು ಕಾಡಬಹುದು!

ಶೌಚಾಲಯದಲ್ಲಿ ಫೋನ್ ಬಳಸುತ್ತೀರಾ? ನಿಮಗೆ ಗೊತ್ತಿಲ್ಲದ ಈ ಸಮಸ್ಯೆಗಳು ಕಾಡಬಹುದು! ಇತ್ತೀಚಿನ ದಿನಗಳಲ್ಲಿ...