No menu items!
6.5 C
Munich
Saturday, May 16, 2026

ಶೌಚಾಲಯದಲ್ಲಿ ಫೋನ್ ಬಳಸುತ್ತೀರಾ? ನಿಮಗೆ ಗೊತ್ತಿಲ್ಲದ ಈ ಸಮಸ್ಯೆಗಳು ಕಾಡಬಹುದು!

Must read

ಶೌಚಾಲಯದಲ್ಲಿ ಫೋನ್ ಬಳಸುತ್ತೀರಾ? ನಿಮಗೆ ಗೊತ್ತಿಲ್ಲದ ಈ ಸಮಸ್ಯೆಗಳು ಕಾಡಬಹುದು!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಿದೆ. ಆದರೆ, ಕೆಲವರು ಶೌಚಾಲಯದಲ್ಲೂ ಮೊಬೈಲ್ ಬಳಸುವ ಅಭ್ಯಾಸ ಬೆಳೆಸಿಕೊಂಡಿದ್ದು, ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಶೌಚಾಲಯದಲ್ಲಿ ಹೆಚ್ಚು ಸಮಯ ಮೊಬೈಲ್ ಬಳಸುತ್ತ ಕುಳಿತುಕೊಳ್ಳುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಇದರ ಪರಿಣಾಮವಾಗಿ ಮಲಬದ್ಧತೆ ಹಾಗೂ ಪೈಲ್ಸ್ (ಮೂಲವ್ಯಾಧಿ) ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ದೀರ್ಘಕಾಲ ಕುಳಿತುಕೊಳ್ಳುವುದು ವಿಸರ್ಜನಾ ಅಂಗಗಳ ಮೇಲೆ ಅನಗತ್ಯ ಒತ್ತಡ ಉಂಟುಮಾಡುತ್ತದೆ.
ಇದೇ ವೇಳೆ, ಶೌಚಾಲಯಗಳಲ್ಲಿ ಇರುವ ಬ್ಯಾಕ್ಟೀರಿಯಾಗಳು ಮೊಬೈಲ್ ಫೋನ್ಗೆ ಅಂಟಿಕೊಳ್ಳುವ ಅಪಾಯ ಹೆಚ್ಚಿರುತ್ತದೆ. ನಂತರ ಅದೇ ಫೋನ್ ಬಳಸುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಇದರಿಂದ ಹೊಟ್ಟೆನೋವು, ಮೂತ್ರನಾಳದ ಸೋಂಕು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಬಹುದು.
ಹೆಚ್ಚಿನವರು ಶೌಚಾಲಯ ಬಳಕೆ ನಂತರ ಕೈಗಳನ್ನು ಸರಿಯಾಗಿ ತೊಳೆಯುವುದನ್ನು ನಿರ್ಲಕ್ಷಿಸುವುದು ಮತ್ತೊಂದು ದೊಡ್ಡ ಸಮಸ್ಯೆ. ಸ್ವಚ್ಛತೆ ಪಾಲಿಸದೆ ಆಹಾರ ಸೇವಿಸಿದರೆ ಬ್ಯಾಕ್ಟೀರಿಯಾಗಳು ದೇಹಕ್ಕೆ ಸೇರಿ ಅತಿಸಾರ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಆದ್ದರಿಂದ ಶೌಚಾಲಯಕ್ಕೆ ಹೋಗುವಾಗ ಮೊಬೈಲ್ ಬಳಸುವುದನ್ನು ತಪ್ಪಿಸುವುದು ಅತ್ಯಂತ ಅಗತ್ಯ. ವೈಯಕ್ತಿಕ ಸ್ವಚ್ಛತೆ ಪಾಲಿಸುವ ಮೂಲಕ ಆರೋಗ್ಯದ ಕಾಳಜಿ ವಹಿಸುವುದು ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article