ಹಾಸನ: ಕರೆಂಟ್ ಹೊಡೆದು ಆಹಾರ ಅರಸಿ ಬಂದಿದ್ದ ಆನೆ ಸಾವು!
ಹಾಸನ :- ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬನವಾಸೆ ಗ್ರಾಮದ ಬಿಎಸ್ಎನ್ಎಲ್ ಟವರ್ ಬಳಿ ಜರುಗಿದೆ.
ಆಹಾರ ಅರಸಿ ಗ್ರಾಮದ ಬಳಿ ಆನೆ ಬಂದಿತ್ತು. ಈ ವೇಳೆ ವಿದ್ಯುತ್ ತಂತಿಗೆ ಆನೆಯ ಸೊಂಡಿಲು ತಾಗಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದು ಕಡೆ ಇದೇ ಸಕಲೇಶಪುರ ತಾಲೂಕಿನ ಮಲಗಳ್ಳಿ ಗ್ರಾಮದಲ್ಲಿ ಆನೆಗಳ ಹಾವಳಿ ಜೋರಾಗಿದೆ. ಭತ್ತದ ಗದ್ದೆಗಳಿಗೆ ಇಂದು ಮುಂಜಾನೆ ಕಾಡಾನೆಗಳ ಹಿಂಡು ನುಗ್ಗಿದೆ. ಆನೆಗಳು ಭತ್ತದ ಬೆಳೆಯನ್ನು ತುಳಿದು, ತಿಂದು ನಾಶ ಮಾಡಿವೆ.