ಹಿಮಾಲಯಕ್ಕೆ ಹೋದ ನರೇಂದ್ರ ಮೋದಿ ಬೇಡಿಕೊಂಡಿದ್ದೇನು ಗೊತ್ತಾ..? ಕೇಳಿದ್ರೆ ಆಶ್ಚರ್ಯ ಪಡ್ತೀರ..!

Date:

ಉತ್ತರಖಾಂಡ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಕೇದಾರನಾಥ್​ ದೇಗುಲಕ್ಕೆ ಭೇಟಿ ನೀಡಿ ಸುಮಾರು ಒಂದೂವರೆ ತಾಸು ಪ್ರಾರ್ಥನೆ ಸಲ್ಲಿಸಿದ್ದಾರೆ.


ದೇವರ ದರ್ಶನ ಪಡೆದ ಮೋದಿ ಪೂಜೆಯಲ್ಲಿ ಪಾಲ್ಗೊಂಡರು ಅದಾದ ಬಳಿಕ ಎರಡು ಕಿಲೋಮೀಟರ್​ ಗುಡ್ಡ ಹತ್ತಿ ಕೇದಾರ್​ನಾಥ್​ ಮಠದ ಗುಹೆಯೊಳಗೆ ಧ್ಯಾನದಲ್ಲಿ ಕುಳಿತರು.


ಒಟ್ಟು 18 ಗಂಟೆಗಳ ಕಾಲ ಧ್ಯಾನ ಮಾಡಿದ್ದ ಪ್ರಧಾನಿ ಮೋದಿ ಬಳಿಕ ಮಾಧ್ಯಮದವರೊಂದಿಗೆ ದರ್ಶನ ಪಡೆದ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


ತುಂಬಾ ವರ್ಷಗಳ ಬಳಿಕ ನಾನು ಪವಿತ್ರಕ್ಷೇತ್ರ ಕೇದಾರ್​ನಾಥ್​ಗೆ ಆಗಮಿಸಿದ್ದೇನೆ ಏಕಾಂತದಲ್ಲಿ ಕೆಲ ಸಮಯ ಕಳೆದಿದ್ದೇನೆ, ಇದು ನನ್ನ ಪುಣ್ಯ ಅಲ್ಲದೆ ಈ ಧೈವ ಸನ್ನಿಧಿಯನ್ನು ಮತ್ತು ಈ ಪ್ರದೇಶದ ಪರಿಸರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.


ಇದಾದ ಬಳಿಕ ಕೇದಾರನಾಥ ದೇವರಲ್ಲಿ ಏನು ಬೇಡಿಕೊಂಡಿರಿ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಯಾವತ್ತೂ ದೇವರ ಬಳಿ ನನಗಾಗಿ ಏನನ್ನೂ ಬೇಡಿಕೊಳ್ಳುವುದಿಲ್ಲ.

ನಾನು ನನಗಾಗಿ ದೇವರ ಬಳಿ ಪ್ರಾರ್ಥಿಸಿಕೊಳ್ಳುವ ಪ್ರವೃತ್ತಿ ನನ್ನದಲ್ಲ ಅವನು ನಮಗೆ ಏನು ಕೊಡಬೇಕೋ ಅದನ್ನು ಕೊಡುತ್ತಾನೆ ಹಾಗಾಗಿ ನಾನು ಈ ದೇಶಕ್ಕಾಗಿ, ದೇಶದ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದೇನೆ. ಚುನಾವಣೆ ಗೆಲುವಿನ ಬಗ್ಗೆಯೂ ಸಹ ನಾನು ಏನನ್ನು ಕೇಳಿಲ್ಲ ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...