ಹಿರಿಯ ನಟ ದ್ವಾರಕೀಶ್ ಅವರಿಗೆ ಎದುರಾಯ್ತು ಸಂಕಷ್ಟ..!! 52 ಲಕ್ಷ ಹಿಂತಿರುಗಿಸುವಂತೆ ಆದೇಶ..
ಹಿರಿಯನಟರಾದ ದ್ವಾರಕೀಶ್ ಕೇವಲ ನಟರಾಗಿ ಉಳಿದುಕೊಳ್ಳದೆ ದ್ವಾರಕೀಶ್ ಚಿತ್ರ ಬ್ಯಾನರ್ ಅಡಿ 50ಕ್ಕು ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದಾರೆ.. ಸೋಲು ಗೆಲುವಿನ ನಡುವೆ ಮುಂದೆ ಸಾಗಿರುವ ದ್ವಾರಕೀಶ್ ಅವರ ನಿರ್ಮಾಣ ಸಂಸ್ಥೆಯಿಂದ ಒಳ್ಳೊಳ್ಳೆ ಚಿತ್ರಗಳು ತೆರೆಗೆ ಬಂದಿವೆ.. ಈ ಹಿಂದೆ ಚಾರುಲತಾ ಹೆಸರಿನ ಸಿನಿಮಾವನ್ನ ನಿರ್ಮಾಣ ಮಾಡಿದ್ರು..
ಈ ಚಿತ್ರಕ್ಕಾಗಿ 52 ಲಕ್ಷ ಹಣವನ್ನ ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್ ಎಂಬುವರಿಂದ ಸಾಲ ಪಡೆದುಕೊಂಡಿದ್ರು.. ಚಿತ್ರ ಬಿಡುಗಡೆಗೊಂಡ ಬಳಿಕ ಹೇಳಿಕೊಳ್ಳುವಂತೆ ಸೌಂಡ್ ಮಾಡಲಿಲ್ಲ.. ಹೀಗಾಗೆ ನಂತರದಲ್ಲಿ ದ್ವಾರಕೀಶ್ ಅವರು ಆಂಧ್ರ ಬ್ಯಾಂಕ್ ಚೆಕ್ ನ ಮೂಲಕ 52 ಲಕ್ಷವನ್ನ ವಾಪಸ್ ನೀಡಿದ್ರು.. ಆದರೆ ಅದು ಬೌಸ್ ಆಗಿದೆ.. ಹೀಗಾಗೆ 5 ವರ್ಷಗಳ ಹಿಂದೆ ಈ ಬಗ್ಗೆ ಚಂದ್ರಶೇಖರ್ ಅವರು ಕೋರ್ಟ್ ಮೆಟ್ಟಿಲೇರಿದ್ದರು..
ಇಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25ನೇ ಎಸಿಎಂಎಂ ನ್ಯಾಯಾಲಯ, ಸಾಲವಾಗಿ ಪಡೆದ ಹಣವನ್ನ ವಾಪಸ್ ನೀಡುವಂತೆ ಆದೇಶಿಸಿದ್ದು, ಇಲ್ಲವಾದರೆ ಒಂದು ವರ್ಷ ಜೈಲಿನ ಶಿಕ್ಷೆಯನ್ನ ಎಂದಿದೆ..