ಚಿಕ್ಕಮಗಳೂರು: ಚಿಕ್ಕಮಗಳೂರಿನ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿರುವ, ಕನ್ನಡದ ಪಂಡಿತ ಹಿರೇಮಗಳೂರು ಕಣ್ಣನ್ ಅವರಿಗೆ ಚಿಕ್ಕಮಗಳೂರು ಜಿಲ್ಲಾಡಳಿತವು ನೋಟಿಸ್ ನೀಡಲಾಗಿದೆ.
ದೇವಾಲಯದ ಆದಾಯ ಕಡಿಮೆ ಇರುವುದರಿಂದ ಸರ್ಕಾರ ನೀಡಿದ ಸಂಬಳ ವಾಪಸ್ ನೀಡುವಂತೆ ತಿಳಿಸಲಾಗಿದೆ.
ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂ. ಜಮೆಯಾಗುತ್ತಿತ್ತು. ಇದೀಗ 7,500 ರೂ. ಸಂಬಳದಲ್ಲಿ 4,500 ವಾಪಸ್ ನೀಡಲು ಸೂಚನೆ ನೀಡಲಾಗಿದೆ.
ಕಣ್ಣನ್ ಅವರು ಕಳೆದ 50 ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಪ್ರತಿ ತಿಂಗಳು ಬರುತ್ತಿದ್ದ ಸಂಬಳವನ್ನು ಜಿಲ್ಲಾಡಳಿತ ತೆಡೆಹಿಡಿದಿದೆ. ಚಿಕ್ಕಮಗಳೂರು ತಹಶಿಲ್ದಾರ್ ಸುಮಂತ್ ನೀಡಿರುವ ನೋಟಿಸ್ ಕಂಡು ಕಣ್ಣನ್ ಅವರು ನೋಟಿಸ್ ನೋಡಿ ಆತಂಕಗೊಂಡಿದ್ದಾರೆ ಅನ್ನೊ ಸುದ್ದಿ ಹರಿದಾಡಿತ್ತು.
ಆದರೆ TNIT ನಿಮಗೆ ನಿಖರ ಮಾಹಿತಿ ನೀಡುತ್ತಿದೆ. ಇಲ್ಲಿ ನೋಟಿಸನ್ನ ನೀವು ನೋಡಲೇಬೇಕು. ಅದರಲ್ಲಿ ಸಂಬಳವನ್ನ ಕೇಳಲಾಗಿಲ್ಲ . ಹೆಚ್ಚುವರಿ ಹಣವನ್ನ ನೀಡಲಾಗಿದ್ದು, ಅದನ್ನ ವಾಪಸ್ಸು ನೀಡುವಂತೆ ಸೂಚಿಸಿದ್ದಾರೆ.
ತಪ್ಪು ಮಾಹಿತಿ ಹರಡಲಾಗುತ್ತಿದ್ದು, TNIT ನಲ್ಲಿ ನಿಖರ ಮಾಹಿತಿ ನೀಡುತ್ತಿದ್ದೇವೆ.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಿಗಧಿತ ಮೊತ್ತಕ್ಕಿಂತ ಜಾಸ್ತಿ ಹಣ ತಸ್ತೀಕು ರೂಪದಲ್ಲಿ ಸಂದಾಯವಾಗಿದ್ದು, ಈಗ ಇಲಾಖೆಯ ಗಮನಕ್ಕೆ ಬಂದಿದೆ. ಆ ಹಣವನ್ನು ಮರುಪಾವತಿ ಮಾಡಲು ನೋಟೀಸ್ ನೀಡಿದ್ದಾರೆಯೇ ಹೊರತು ಅರ್ಚಕರ ಸಂಬಳವನ್ನು ಕೇಳಿಲ್ಲ.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಇಲಾಖೆ ಕಣ್ಣು ಮುಚ್ಚಿ ಮಲಗಿತ್ತಾ ಎಂಬ ಪ್ರಶ್ನೆ ಈಗ ಮೂಡುತ್ತಿದೆ. ಕೊಡೋ ದುಡ್ಡನ್ನೇ ಸರಿಯಾಗಿ, ಸರಿಯಾದ ಸಮಯದಲ್ಲಿ ಕೊಡಲಾಗದ ಮುಜರಾಯಿ ಇಲಾಖೆ ಹೇಗೆ ಹೆಚ್ಚು ಹಣ ಹಾಕಿತು ಎಂಬುದು ಕೂಡ ಯಕ್ಷಪ್ರಶ್ನೆ.