ಹೀಗಿರುತ್ತಾ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ XI?

Date:

ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಗೆ ಟೀಮ್‌ ಇಂಡಿಯಾದ ಅತ್ಯುತ್ತಮ ಇಲೆವೆನ್ ಕಟ್ಟಿರುವ ಆಸ್ಟ್ರೇಲಿಯಾದ ಮಾಜಿ ಚೈನಾಮನ್ ಶೈಲಿಯ ಸ್ಪಿನ್ನರ್‌ ಬ್ರಾಡ್‌ ಹಾಗ್, ಭಾರತ ತಂಡಕ್ಕೆ ರೋಹಿತ್‌ ಶರ್ಮಾ ಮತ್ತು ವಿರಾಟ್ ಕೊಹ್ಲಿ ಓಪನರ್‌ಗಳಾಗಿ ಆಡಬೇಕು ಎಂದಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್‌ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್‌ ಆರಂಭಿಕರಾಗಿ ಕಣಕ್ಕಿಳಿದು ಭಾರತ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟದ್ದರು. ಈ ಜೋಡಿ ಹೀಗೆಯೇ ಮುಂದುವರಿಯಬೇಕು ಎಂದು ಹಾಗ್ ಹೇಳಿದ್ದಾರೆ.
“ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ನನ್ನ ಆಯ್ಕೆಯ ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಲಿದ್ದಾರೆ. ಇದು ಶಿಖರ್‌ ಧವನ್‌ ಮೇಲೆ ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ ಆಗಬಹುದು. ಆದರೆ, ಭಾರತ ತಂಡದ ಮಧ್ಯಮ ಕ್ರಮಾಂಕ ಬಲಪಡಿಸಲು ಕೊಹ್ಲಿಯನ್ನು ಅಗ್ರಕ್ರಮಾಂಕಕ್ಕೆ ಕಳುಹಿಸುವ ಅನಿವಾರ್ಯ ಸ್ಥಿತಿ ಇದೆ,” ಎಂದು ಹಾಗ್ ತಮ್ಮ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಕೊಹ್ಲಿ ಓಪನರ್‌ ಆದರೆ ಖಾಲಿ ಉಳಿಯುವ ಮೂರನೇ ಕ್ರಮಾಂಕದ ಬ್ಯಾಟಿಂಗ್‌ಗೆ ಸೂರ್ಯಕುಮಾರ್‌ ಯಾದವ್‌ ಅವರನ್ನು ಆಯ್ಕೆ ಮಾಡಿ ನಂತರದ ಸ್ಥಾನದಲ್ಲಿ ಕೆಎಲ್ ರಾಹುಲ್ ಅವರನ್ನು ಬ್ಯಾಟ್‌ ಮಾಡಲು ಬಿಡಬೇಕು ಎಂದಿದ್ದಾರೆ.


“ಮೂರನೇ ಕ್ರಮಾಂಕಕ್ಕೆ ಸೂರ್ಯಕುಮಾರ್‌ ಯಾದವ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಅವರು ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವೈವಿದ್ಯತೆ ತರುವ ಆಟಗಾರ. ನಾಲ್ಕನೇ ಕ್ರಾಂಕದಲ್ಲಿ ಕೆಎಲ್‌ ರಾಹುಲ್ ಆಡುವುದು ಸೂಕ್ತ. ರಿಷಭ್ ಪಂತ್‌, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ 5, 6 ಮತ್ತು 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕು,” ಎಂದು ತಿಳಿಸಿದ್ದಾರೆ.
ಇನ್ನು ತಂಡದ ಬೌಲಿಂಗ್‌ ವಿಭಾಗಕ್ಕೆ ಮೊದಲ ಆಯ್ಕೆಯ ವೇಗಿಯನ್ನಾಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ತೆಗೆದುಕೊಂಡಿರುವ ಹಾಗ್, ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ನೆರವಾಗಬಲ್ಲ ಶಾರ್ದುಲ್ ಠಾಕೂರ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸ್ವಿಂಗ್‌ ಕಿಂಗ್‌ ಭುವನೇಶ್ವರ್ ಕುಮಾರ್‌ ಜೊತೆಗೆ, ಸ್ಪಿನ್ನರ್‌ ಆಗಿ ಕುಲ್ದೀಪ್ ಯಾದವ್ ಅಥವಾ ಯುಜ್ವೇಂದ್ರ ಚಹಲ್‌ ಅವರನ್ನು ಆಯ್ಕೆ ಮಾಡಬೇಕು ಎಂದಿದ್ದಾರೆ.
ಬ್ರಾಡ್‌ ಹಾಗ್‌ ಆಯ್ಕೆ ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಇಲೆವೆನ್
1. ವಿರಾಟ್ ಕೊಹ್ಲಿ (ನಾಯಕ/ ಓಪನರ್)
2. ರೋಹಿತ್ ಶರ್ಮಾ (ಓಪನರ್)
3. ಸೂರ್ಯಕುಮಾರ್‌ ಯಾದವ್ (ಬ್ಯಾಟ್ಸ್‌ಮನ್)
4. ಕೆಎಲ್ ರಾಹುಲ್ (ಬ್ಯಾಟ್ಸ್‌ಮನ್
5. ರಿಷಭ್ ಪಂತ್ (ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್)
6. ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್)
7. ರವೀಂದ್ರ ಜಡೇಜಾ (ಆಲ್‌ರೌಂಡರ್‌)
8. ಶಾರ್ದುಲ್ ಠಾಕೂರ್ (ಬಲಗೈ ವೇಗಿ)
9. ಭುವನೇಶ್ವರ್‌ ಕುಮಾರ್‌ (ಬಲಗೈ ವೇಗಿ)
10. ಯುಜ್ವೇಂದ್ರ ಚಹಲ್/ಕುಲ್ದೀಪ್ ಯಾದವ್ (ಸ್ಪಿನ್ನರ್‌)

11. ಜಸ್‌ಪ್ರೀತ್ಚ ಬುಮ್ರಾ (ಬಲಗೈ ವೇಗಿ)

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...