ಹೀಗೆ ಮಾಡಿದ್ರೆ ನೀವೇ ಸೌಂದರ್ಯವತಿ

Date:

ಪ್ರತಿಯೊಬ್ಬರಿಗೂ ಸುಂದರವಾಗಿ ಕಾಣಿಸಬೇಕು ಅಂತಾ ಮಹಾದಾಸೆ ಇರುತ್ತೆ. ಅದಕ್ಕೆ ಹಲವಾರು ಟಿಪ್ಸ್ಗಳನ್ನು ಅನುಸರಿಸುತ್ತಾರೆ. ಇಲ್ಲಿ ಕೆಲವು ಅಸಾಮಾನ್ಯ ಬ್ಯೂಟಿ ಟ್ರಿಕ್ಸ್ ನೀಡಲಾಗಿವೆ. ಟ್ರೈ ಮಾಡಿದರೆ ಖಂಡಿತವಾಗಿ ಬದಲಾವಣೆ ಕಾಣಬಹುದು. ಕಣ್ಣಿನ ಸುತ್ತಲೂ ಊತ ಕಾಣಿಸಿಕೊಂಡರೆ ಒಂದು ಸ್ಪೂನ್ ತೆಗೆದುಕೊಂಡು ಅದನ್ನು ಫ್ರಿಜ್ನಲ್ಲಿಡಿ. ಐದು ನಿಮಿಷದ ನಂತರ ಅದರಿಂದ ಕಣ್ಣಿನ ಸುತ್ತ ಮಸಾಜ್ ಮಾಡಿ. ಇದರಿಂದ ಕಣ್ಣಿನ ಊತ ಕಡಿಮೆಯಾಗುತ್ತದೆ.ಮರಳನ್ನು ನೀರಿನ ಜೊತೆ ಸೇರಿಸಿ ಸ್ಕ್ರಬ್ ಮಾಡಿದರೆ ಆರೋಗ್ಯಕ್ಕೆ ಹಾಗೂ ದೇಹಕ್ಕೂ ಉತ್ತಮ.ನಿಂಬೆ ರಸವನ್ನು ಹೇರ್ ಹೈ ಲೈಟ್ ಆಗಿ ಬಳಸಬಹುದು. ಅದಕ್ಕಾಗಿ ನಿಂಬೆ ರಸ ಮತ್ತು ನೀರನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕೂದಲಿಗೆ ಹಚ್ಚಿ. ಇದರಿಂದ ಬಿಸಿಲಿಗೆ ಹೋದಾಗ ಕೂದಲು ಹೊಳೆಯುತ್ತದೆ.

ಹಲ್ಲು ಹೊಳೆಯುವಂತೆ ಮಾಡಲು ಸ್ಟ್ರಾಬೆರ್ರಿಯಿಂದ ಹಲ್ಲು ತಿಕ್ಕಬೇಕು. ಅಥವಾ ಸ್ಟ್ರಾಬೆರ್ರಿ ಸ್ಮಾಷ್ ಮಾಡಿ ಅದನ್ನು ಪೇಸ್ಟ್ ಜೊತೆ ಬೆರೆಸಿ ಹಲ್ಲುಜ್ಜಿದರೆ ಹಲ್ಲು ಹೊಳೆಯುತ್ತದೆ.ಮುಖದಲ್ಲಿ ಪಿಂಪಲ್ ಕಾಣಿಸಿಕೊಂಡರೆ ಟೂತ್ ಪೇಸ್ಟನ್ನು ಪಿಂಪಲ್ ಮೇಲೆ ಹಚ್ಚಬೇಕು. ಇದರಿಂದ ಪಿಂಪಲ್ ನಿವಾರಣೆಯಾಗುತ್ತದೆ.ಕೂದಲು ಆಯ್ಲಿ ಆಗಿದ್ದರೆ ಅದನ್ನು ಕ್ಲೀನ್ ಮಾಡಲು ಡ್ರೈ ಶಾಂಪೂ ಇಲ್ಲದಿದ್ದರೆ, ಅದಕ್ಕೆ ಬೇಬಿ ಪೌಡರ್ ಬಳಸಿ.ತುಟಿಗಳಿಗೆ ನ್ಯಾಚುರಲ್ ಬಣ್ಣ ಬರಬೇಕೆಂದರೆ ಬೀಟ್ರೂಟ್ ಅನ್ನು ಅರೆದು, ಅದರ ನೀರನ್ನು ತುಟಿಗೆ ಹಚ್ಚುತ್ತಿರಬೇಕು. ಇದರಿಂದ ತುಟಿ ಕೆಂಪಾಗುತ್ತದೆ. ಉಗುರು ಪದೇ ಪದೇ ಕತ್ತರಿಸಿ ಹೋಗುತ್ತಿದ್ದರೆ, ನಿಂಬೆ ಹಣ್ಣನ್ನು ಕತ್ತರಿಸಿ ಅದರ ನಡುವೆ ಬೆರಳನ್ನು ಅದ್ದಿಡಿ. ಹೀಗೆ ಮಾಡಿದರೆ ಉಗುರು ಸ್ಟ್ರಾಂಗ್ ಆಗುತ್ತದೆ.

Share post:

Subscribe

spot_imgspot_img

Popular

More like this
Related

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ ಸಿದ್ದರಾಮಯ್ಯ

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ...

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು...

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ!

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ! ಬೆಂಗಳೂರು: ಸಿಮೆಂಟ್ ಮಿಕ್ಸರ್...

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು!

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು! ಕಿವಿ...