ಹೀಗೆ ಮಾಡಿ ಪ್ಲಾಟ್ ಫಾರ್ಮ್ ಟಿಕೆಟ್ ಬಳಸಿ ರೈಲು ಹತ್ತಬಹುದು!

1
35

ಇನ್ನುಮುಂದೆ ಕೇವಲ ಪ್ಲಾಟ್‌ಫಾರ್ಮ್ ಟಿಕೆಟ್ ಇದ್ದರೆ ಸಾಕು ರೈಲು ಹತ್ತಬಹುದು, ಹೌದು ಮುಂಗಡವಾಗಿ ಟಿಕ್ ಕಾಯ್ದಿರಿಸದೆ ಇದ್ದರೂ, ಟಿಕೆಟ್ ಪಡೆದುಕೊಳ್ಳದೆ ಇದ್ದರೂ ಕೂಡ ರೈಲು ಹತ್ತಬಹುದಾಗಿದೆ.

ಯುಟಿಸಿ ಆಪ್‌ ಮೂಲಕ ಇಲ್ಲವೇ ಸ್ಟೇಷನ್‌ ಗಳಲ್ಲಿರುವ ವೆಂಡಿಂಗ್‌ ಮೆಷಿನ್‌ ಗಳ ಮೂಲಕ ಪ್ಲಾಟ್‌ಫಾಮ್‌ ಟಿಕೆಟ್‌ ಪಡೆದುಕೊಂಡರೆ ಸಾಕು. ಅದರೊಂದಿಗೆ ರೈಲು ಹತ್ತಬಹುದು. ರೈಲು ಹತ್ತಿದ ನಂತರ ಅದನ್ನು ಟಿಟಿಇಗೆ ತೋರಿಸಿ ಟಿಕೆಟ್‌ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ ಸೀಟುಗಳು ಲಭ್ಯವಿದ್ದರೆ ರಿಸರ್ವೇಷನ್ ಮಾಡಿಸಿಕೊಂಡು ಟಿಕೆಟ್ ಹೊಂದಬಹುದು.

ಕೇವಲ ಪ್ಲಾಟ್‌ಫಾರ್ಮ್ ಟಿಕೆಟ್‌ ಇದ್ದರೆ ಸಾಕು. ರೈಲು ಹತ್ತಿದ ನಂತರ ಪ್ಲಾಟ್‌ಫಾರ್ಮ್ ಟಿಕೆಟ್‌ ಅನ್ನು ಟಿಟಿಇಗೆ ತೋರಿಸಿ, ಟಿಕೆಟ್‌ ಖರೀದಿಸಿದರೆ ಸಾಕು. ಕೊನೆಯ ನಿಮಿಷಗಳಲ್ಲಿ ಗಡಿ ಬಿಡಿಯಿಂದ ರೈಲ್ವೆ ನಿಲ್ದಾಣಗಳಿಗೆ ತಲುಪಿ ಹೈರಾಣವಾಗುವುದನ್ನು ತಪ್ಪಿಸಲು ಭಾರತೀಯ ರೈಲ್ವೆ ಈ ಸೌಲಭ್ಯವನ್ನು ಪ್ರಯಾಣಿಕರಿಗೆ ಕಲ್ಪಿಸಿದೆ.

ಮುಂಗಡ ಟಿಕೆಟ್‌ ಕಾಯ್ದಿರಿಸದೆ ಸ್ಟೇಷನ್‌ ಗೆ ಬರುವ ಪ್ರಯಾಣಿಕರು ಅಲ್ಲಿನ ಟಿಕೆಟ್‌ ಕೌಂಟರ್‌ಗಳ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ. ರೈಲಿನಲ್ಲಿ ಪ್ರಯಾಣಿಸಬೇಕಿದ್ದರೆ ತಿಂಗಳು ಅಥವಾ ವಾರದ ಮೊದಲೇ ಟಿಕೆಟ್ ಕಾಯ್ದಿರಿಸಲಾಗುತ್ತದೆ, ಎರಡು ರೀತಿಯಲ್ಲಿ ಟಿಕೆಟ್ ಖರೀದಿಸಿ ರೈಲಿನಲ್ಲಿ ಪ್ರಯಾಣಿಸಬಹುದು.

ಒಂದು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಬಹುದಾಗಿದೆ, ಒಂದೊಮ್ಮೆ ಏಕಾಏಕಿ ಯಾವುದೋ ಕಾರ್ಯದ ನಿಮಿತ್ತ ನೀವು ಹೊರಗೆ ಹೋಗಬೇಕಿದ್ದರೆ ಅಂತಹ ಸಮಯದಲ್ಲಿ ತತ್ಕಾಲ್ ಮೂಲಕ ಟಿಕೆಟ್ ಖರೀದಿಸಬಹುದು.

 

 

1 COMMENT

LEAVE A REPLY

Please enter your comment!
Please enter your name here