ನಮ್ಮ ರಾಜ್ಯಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಬೇಕಿತ್ತಾ? ಹಳ್ಳಿಯ ಮುಖ್ಯಸ್ಥರನ್ನು ಕೇಳಿದರೆ ಹೊರಗಿನವರು ಯಾರು ಬಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇವರಿಗೆ ಹೊರಗಿನಿಂದ ಬಂದವರ ಯಾವುದೇ ಲಿಸ್ಟ್ ಬೇಕಿಲ್ಲ. ಇವರಿಗೆ ಇಲ್ಲಿರುವವರ ಲಿಸ್ಟ್ ಬೇಕಾಗಿದೆ ಎಂದು ಮಾಜಿ ಸಸಿ ಸಚಿವ ಸಿಎಂ ಇಬ್ರಾಹಿಂ ಮೋದಿಯವರ ವಿರುದ್ಧ ದೂರಿದ್ದಾರೆ.
ನೋಟ್ ಬ್ಯಾನ್ ಆದಾಗ ಬಂದಿದ್ದ ದರಿದ್ರ ಇನ್ನೂ ಹೋಗಿಲ್ಲ. ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟು ಶೇವಿಂಗ್ ಗೆ ಕುಳಿತಂತೆ ಆಗಿದೆ. ಕುತ್ತಿಗೆ ಸೀಳ್ತಾನೋ ಅಥವಾ ಇನ್ನೆಲ್ಲಿ ಸೀಳ್ತಾನೋ ಗೊತ್ತಿಲ್ಲ. ಕತ್ತಿ ಕೊಟ್ಟು ಬಿಟ್ಟಿದ್ದೇವೆ. ಏನನ್ನೂ ಮಾತನಾಡುವಂತಿಲ್ಲ. ಮಾತನಾಡಿದರೆ ಮತ್ತೆಲ್ಲಿ ಕತ್ತಿ ಸೀಳುತ್ತಾನೋ ಗೊತ್ತಿಲ್ಲ ಎಂದು ಏಕವಚನದಲ್ಲೇ ಸಚಿವ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.