ಹುಚ್ಚವೆಂಕಟ್ ರಚಿತಾರಾಮ್ ಗೆ ಹೇಳಿದ ಕಿವಿಮಾತು ಏನು?

Date:

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾರಾಮ್ ನಟನೆಯ ಐ ಲವ್ ಯು ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಾಖಲೆಯ ಕಲೆಕ್ಷನ್ ಕೂಡ ಮಾಡಿದೆ…
ಸಿನಿಮಾವನ್ನು ಜನ‌ ಮೆಚ್ಚಿದ್ದರೂ ಕೂಡ ರಚಿತಾ ರಾಮ್ ಬೋಲ್ಡ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿರುವ ಬಗ್ಗೆ ವಿರೋಧ ವ್ಯಕ್ತವಾಗಿದೆ.
ರಚಿತಾ ರಾಮ್ ಅವರ ತಂದೆ-ತಾಯಿ ಕೂಡ ಇದರಿಂದ ಬೇಜಾರಾಗಿದ್ದಾರೆ.‌ ನಟನೆ ಓಕೆ, ಒಬ್ಬ ತಾಯಿಯಾಗಿ ನಿನ್ನ ನೋಡಲು ಆಗಿಲ್ಲ ಎಂದು ಅವರ ತಾಯಿ ನೇರವಾಗಿಯೇ ಅವರಲ್ಲಿ ಹೇಳಿದ್ದರಂತೆ. ಅಪ್ಪ ಸಿನಿಮಾವನ್ನೇ ನೋಡಿಲ್ಲ. ಹೀಗಾಗಿ ರಚಿತಾ ಕೂಡ ಬೇಜಾರಾಗಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಹೇಳಿರುವ ರಚಿತಾ ಅಪ್ಪಗೆ ಕ್ಷಮೆ ಕೇಳಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ರಚಿತಾ ಹಾಟ್ ದೃಶ್ಯದ ಬಗ್ಗೆ ನಟ, ನಿರ್ದೇಶಕ ಹುಚ್ಚವೆಂಕಟ್ ಅವರು ಕೆಂಡಾಮಂಡಲರಾಗಿರುವುದು ಕೂಡ ನಿಮಗೆ ಗೊತ್ತೇ ಇದೆ. ಡೈರೆಕ್ಟರ್ ಚಂದ್ರು ಹಣ ಮಾಡೋಕೆ ಅವರನ್ನು ಹಾಗೆ ತೋರಿಸಿದ್ದಾನೆ ಎಂದು ಕಿಡಿಕಾರಿದ್ದ ವೆಂಕಟ್ ರಚಿತರಾಮ್ ವಿರುದ್ಧವೂ ಮಾತಾಡಿದ್ದರು.
ಈಗ ವಿವಾದ ತಣ್ಣಗಾಗುತ್ತಿದ್ದು, ವೆಂಕಟ್ ಬುದ್ಧಿಮಾತು ಹೇಳಿದ್ದಾರೆ.


ಡೈರೆಕ್ಟರ್ ಚಂದ್ರು ಅವರಿಗೆ ನೀವು ಆ ಒಂದು ದೃಶ್ಯನ ತೆಗಿ.‌ಕಥೆ ಬಗ್ಗೆ ನಾನು ಏನೂ ಹೇಳಿಲ್ಲ. ಅಶ್ಲೀಲತೆ ಬೇಡ ಎಂದಿದ್ದಾರೆ. ಫ್ಯಾಮಿಲಿ ಸಮೇತ ಚಿತ್ರ ನೋಡುವಂತಿರಬೇಕು ಎಂದಿದ್ದಾರೆ.
ಅದೇರೀತಿ ರಚಿತಾರಾಮ್ ಅವರ ಬಗ್ಗೆಯೂ ಮಾತಾಡಿರುವ ಅವರು ಆಗಿದ್ದು ಆಯ್ತು , ಏನೂ ಮಾಡಕ್ಕೆ ಆಗಲ್ಲ .ಇನ್ನು ಮುಂದೆ ಹೀಗೆ ಮಾಡಬೇಡ ಎಂದು ಕಿವಿಮಾತು ಹೇಳಿದ್ದಾರೆ.
ರಚಿತಾ ಕೂಡ ಅಪ್ಪ-ಅಮ್ಮಗೆ ಬೇಜಾರಾಗಿದೆ ಎಂದು ಮನನೊಂದಿದ್ದಾರೆ. ಇಂಥಾ ಪಾತ್ರದಲ್ಲಿ ನಟಿಸಲ್ಲ ಎಂದು ಅವರೂ ಕೂಡ ಘೋಷಿಸಿದ್ದಾರೆ.
ಐ ಲವ್ ಯು ಕನ್ನಡ ಮಾತ್ರವಲ್ಲದೆ, ತೆಲುಗಲ್ಲೂ ಯಶಸ್ವಿ ಪ್ರದರ್ಶನ ಕಾಣಿತ್ತಿದೆ.
ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳಿದ್ದರೂ ರಚಿತಾರ ಆ ಒಂದು ದೃಶ್ಯ ಮಾತ್ರ ವಿವಾದಕ್ಕೆ ನಾಂದಿ ಹಾಡಿದ್ದು.
ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಸಹ ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದರು.

Share post:

Subscribe

spot_imgspot_img

Popular

More like this
Related

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...