ಹುಚ್ಚ ವೆಂಕಟ್ ಅವರ ಹುಚ್ಚಾಟ ಇತ್ತೀಚೆಗೆ ಹೆಚ್ಚಾಗಿದ್ದು ಮಡಿಕೇರಿ ಮಂಡ್ಯ ಮತ್ತು ದೊಡ್ಡಬಳ್ಳಾಪುರ ಊರುಗಳಲ್ಲಿ ಸಾರ್ವಜನಿಕರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಇನ್ನು ಇದೀಗ ಹುಚ್ಚ ವೆಂಕಟ್ ಅವರ ಕಚ್ಚಾಟದ ಸುದ್ದಿಗಳು ಅತಿಯಾಗಿ ಕೇಳಿ ಬರುತ್ತಿದ್ದು ಇತ್ತೀಚೆಗೆ ನಡೆದ ಬಿಗ್ ಬಾಸ್ ಸೀಸನ್ 7 ಸುದ್ದಿಗೋಷ್ಠಿಯಲ್ಲಿ ಸಹ ಈ ವಿಷಯವನ್ನು ಚರ್ಚಿಸಲಾಯಿತು. ಬಿಗ್ ಬಾಸ್ ಕುರಿತಾಗಿ ಮಾತನಾಡುವಾಗ ಹುಚ್ಚ ವೆಂಕಟ್ ಅವರ ವಿಷಯ ಪ್ರಸ್ತಾಪವಾದಾಗ ಕಿಚ್ಚ ಸುದೀಪ್ ಅವರು ಹುಚ್ಚ ವೆಂಕಟ್ ಅವರ ಬಗ್ಗೆ ಮಾತನಾಡಿದರು.
ಹುಚ್ಚ ವೆಂಕಟ್ ಅವರು ತೀರಾ ಕೆಟ್ಟ ಮನುಷ್ಯ ಅಲ್ಲ ಅವರು ಏನು ಹೇಳಿಕೊಳ್ಳಬೇಕು ಎಂದುಕೊಳ್ಳುತ್ತಾರೆ ಆದರೆ ಅವರು ಹೇಳುವ ರೀತಿ ತಪ್ಪಾಗಿದೆ ಅಷ್ಟೇ. ಅವರಿಗೆ ಸಹಾಯದ ಅವಶ್ಯಕತೆ ಇದೆ , ಒಳ್ಳೆಯ ಸಹಾಯ ಸಿಕ್ಕರೆ ಅವರು ಯಾವುದೇ ರೀತಿಯ ಹಾನಿ ಮಾಡಲ್ಲ ಎಂದಿದ್ದಾರೆ.