ಚಂದನವನದ ಸ್ಟಾರ್ ನಟ, ಅಭಿಮಾನಿಗಳ ಪ್ರೀತಿಯ ‘ದಾಸ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ಆರ್.ಆರ್ ನಗರ ನಿವಾಸದ ಮುಂದೆ ನಾನಾ ಕಡೆಗಳಿಂದ ಆಗಮಿಸಿದ ಅಭಿಮಾನಿಗಳ ಜೊತೆಗೆ ದರ್ಶನ್ 43 ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಮಾಧ್ಯಮದವರೊಂದಿಗೆ ಬರ್ತ್ ಡೇ ಸಂತೋಷ ಹಂಚಿಕೊಂಡರು. ಪ್ರತೀ ವರ್ಷ ಬರುವಂತೆ ತುಂಬಾ ಜನ ಅಭಿಮಾನಿಗಳು ಬರ್ತಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕೇಕ್ ತಂದಿಲ್ಲ. ಮೊಲ, ಬಾತುಕೋಳಿ ಗಿಫ್ಟ್ ಕೊಟ್ಟಿದ್ದಾರೆ. ಸಾಕಷ್ಟು ದವಸ ಧಾನ್ಯಗಳನ್ನು ತಂದಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಗ್ಲಿಷ್ ಮಾಧ್ಯಮದವರು ಇಂಗ್ಲಿಷ್ ನಲ್ಲಿ ಮಾತಾಡುವಂತೆ ಹೇಳಿದಾಗ ‘ ನನಗೆ ಇಂಗ್ಲಿಷ್ ಬರುವುದಿಲ್ಲ. ಕಾರ್ಪೋರೇಶನ್ ಸ್ಕೂಲಲ್ಲಿ ಓದಿದವನಿಗೆ ಇಂಗ್ಲಿಷ್ ಎಲ್ಲಿ ಬರುತ್ತೆ? ಎಂದು ಪ್ರಶ್ನಿಸಿದರು. ಈ ಮೂಲಕ ಕನ್ನಡ ಭಾಷಾಭಿಮಾನ ಮೆರೆದರು.